ಶಿವಕಾರ್ತಿಕೇಯನ್ ಅಭಿನಯದ ಈ ಚಿತ್ರಕ್ಕೆ ರಶ್ಮಿಕಾ ನಾಯಕಿ

ಶಿವಕಾರ್ತಿಕೇಯನ್ ಅಭಿನಯದ ಈ ಚಿತ್ರಕ್ಕೆ ರಶ್ಮಿಕಾ ನಾಯಕಿ

ಚೆನ್ನೈ ಮಾ. 27, ನ್ಯೂಸ್ ಎಕ್ಸ್ ಪ್ರೆಸ್: ಚಂದನವನದ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಮಿಂಚಿದ್ದು ನಮಗೆಲ್ಲ ಗೊತ್ತೀರುವ ವಿಷಯ, ಇದೀಗ ಕಾಲಿವುಡ್ ಗೂ ಕಾಲಿಟ್ಟಿದ್ದು ಬಕ್ಕಿಯಾರಾಜ್ ಕಣ್ಣನ್ ಅವರ ನಿರ್ದೇಶನದ ಕಾರ್ತಿ ವಿರುದ್ಧ ನಟಿಸಲು ಇತ್ತೀಚೆಗೆ ಸಹಿ ಹಾಕಿದ್ದಳು.

ರಶ್ಮಿಕಾ, ಈಗ ಶಿವಕಾರ್ತಿಕೇಯನ್ ನಾಯಕನಾಗಿ ನಟಿಸುತ್ತಿರುವ  ‘ಎಸ್ಕೆ17’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಆಫರ್ ಸಿಕ್ಕಿದೆ. ವಿಘ್ನೇಶ್ಶಿವನ್ ನಿರ್ದೇಶನದಲ್ಲಿ ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

ಜುಲೈನಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಖಚಿತಪಡಿಸಿದ್ದಾರೆ. ಈಗಾಗಲೇ ವಿಜಯ್ ದೇವರಕೊಂಡ ಅವರ ಜೊತೆಯಲ್ಲಿ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ನಟಿಸಿದ್ದು, ಧ್ರುವಾ ನಟನೆಯ ಪೊಗರು ಚಿತ್ರದಲ್ಲೂ ನಾಯಕಿಯಾಗಿ ರಶ್ಮಿಕಾ ಮಿಂಚಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos