ಶ್ರಾವಣಮಾಸ ಹಬ್ಬಗಳ ಮಹಾಪೂರ

ಬೆಂಗಳೂರು, ಆ. 10: ಶ್ರಾವಣ ಮಾಸದಲ್ಲಿ ಪ್ರತಿ ವಾರವೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲೂ ಶ್ರಾವಣ ಶನಿವಾರ ಮತ್ತು ಸೋಮವಾರ ಅತ್ಯಂತ ಶ್ರೇಷ್ಟತೆಯನ್ನು ಹೊಂದಿದ್ದು, ನಗರದ ಎಲ್ಲಾ ದೇವಾಲಯಗಳಲ್ಲಿ ಭಕ್ತರ ಮಹಾಪೂರವೆ ನೆರಯುತ್ತಾರೆ. ನಗರ ಮತ್ತು ಗ್ರಾಮಾಂತರದಲ್ಲಿರುವ ದೇಗುಲಗಳಲ್ಲಿ ಶ್ರಾವಣ ಮಾಸದ ಅಂಗವಾಗಿ ವಿಶೇಷ ಅಲಂಕಾರ, ಪೂಜೆ ನಡೆಯುತ್ತದೆ.
ಮಲ್ಲೇಶ್ವರಂ ನ ಕಾಡುಮಲ್ಲೇಶ್ವರ, ಮಹಾಲಕ್ಷ್ಮಿ ಲೇಔಟ್ ಶ್ರೀ ನಿವಾಸ ಸ್ವಾಮಿ (ಮರಿತಿರುಪತಿ), ಕೋಟೆ ವೆಂಕಟರಮಣ, ಬನಶಂಕರಿ ಎರಡನೆ ಹಂತದ ದೇವಗಿರಿ ಮತ್ತು ಶ್ರೀ ತಿರುಮಲಗಿರಿಯ ವೆಂಕಟೇಶ್ವರ ದೇವಾಲಯ, ಗವಿಂಗಗಾಧರೇಶ್ವರ ಸ್ವಾಮಿ ದೇವರುಗಳಿಗೆ ಪ್ರತಿ ಶನಿವಾರ ವಿಶೇಷ ಪೂಜೆ ಮತ್ತು ಅಲಂಕಾರ ಸೇವೆ ನಡೆಯುತ್ತದೆ. ದೊಡ್ಡಬಳ್ಳಾಪುರ ಕನಸವಾಡಿ, ಚಿಕ್ಕಮಧುರೆಯ ಶನೈಶ್ವರ ದೇವಾಲಯಕ್ಕೆ ಪ್ರತಿ ಶನಿವಾರದಂದು ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಿಮಿಸುತ್ತಾರೆ. ಪ್ರತಿ ಶನಿವಾರ ಮಧುರೆಯ ಶನೈಶ್ವರ ದೇಗುಲದಲ್ಲಿ ಹರಕೆ ಮತ್ತು ಪೂಜೆಗೆ, ಬೆಳಗಿನ ಜಾವ ಎರಡು ಗಂಟೆಯಿಂದ ರಾತ್ರಿ ಒಂಭತ್ತು ಗಂಟೆವರೆಗೆ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ದರ್ಶನ ಪಡೆಯುತ್ತಾರೆ.

ನಿತ್ಯ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತಭಿಷೇಕ, ತೈಲಾಭಿಷೇಕ ಪೂಜಾಕಾರ್ಯಗಳು ಮತ್ತುಸಂಕಲ್ಪಗಳು ನೆರವೇರುತ್ತವೆ.
ದೇವನಹಳ್ಳಿಯ ವೇಣುಗೋಪಾಲಸ್ವಾಮಿ, ಬೆಟ್ಟಕೋಟೆ ವೆಂಕಟರಮಣಸ್ವಾಮಿ ಕೋಟೆ ಒಳಬಾಗದಲ್ಲಿರುವ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀವೇಣುಗೋಪಾಲಸ್ವಾಮಿ ದೇವಾಲಯದಲ್ಲೂ ಶ್ರಾವಣ ಮಾಸದ ಪೂಜೆ ಪ್ರತಿ ಸೋಮವಾರ ಹಾಗೂ ಶನಿವಾರ ನಡೆಯುತ್ತದೆ. ಸೂಲಿಬೆಲೆಯ ಚನ್ನಗೌಡ ನಗರದಲ್ಲಿರುವ ಪಂಚದೇವಾಲಯಗಳಲ್ಲೊಂದಾದ ವೆಂಕಟೇಶ ಸ್ವಾಮಿ, ಬತ್ತಿಗಾನಹಳ್ಳಿ ರಮಾನಂದ ಆಸ್ರಮದ ಬಳಿಯ ಆಂಜನೇಯ ಸ್ವಾಮಿ, ಸೂಲಿಬೆಲೆಯ ಬಾಬಾಸ್ವಾಮಿ ದೇಗುಲ, ಕಾಶಿ ಸೋಮೇಶ್ವರ ದೇವಾಲಯ ಗಿಂಡ್ಲಾ ಬಾವಿ ಬಳಿಯಿರುವ ಸೋಮೇಶ್ವರ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ವೇದವ್ಯಾಸ ಭಟ್ಟರು ಬೆಂಗಳೂರು ನಗರ ಮತ್ತು ಗ್ರಾಮಾಂತರ ದೇಗುಲಗಳ ಪೂಜಾ ಕಾರ್ಯಕ್ರಮ ಮತ್ತು ವಿಶೇಷ ಪೂಜಾ ವಿಧಾನಗಳನ್ನು ವಿವರಿಸಿದರು.

ನಂದಿ ಕ್ಷೇರದ ಸಪ್ತಗಿರಿಗಳಲ್ಲೊಂದಾದ ದೇವನಹಳ್ಳಿ ತಿಮ್ಮರಾಯ ಸ್ವಾಮಿಗೆ ಶ್ರಾವಣ ಮಾಸದ ವಿಶೇಷವಾಗಿ ನಿತ್ಯವೂ ಅಭಿಷೇಕ, ಅಲಂಕಾರ, ನಿತ್ಯಪೂಜೆ, ಹೂವಿನ ಅಲಂಕಾರ ಸೇವೆಗಳು ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗಿ ರುದ್ರಾಭಿಷೇಕ, ಕ್ಷೀರಾಭಿಷೇಕ, ಜಜಲಾಭಿಷೇಕ, ಪಂಚಾಮೃತಾಭಿಷೇಕ, ಹಲವು ಬಗೆಯ ಹೂವಿನ ಅಲಂಕಾರ ಸೇವೆಗಳು ನೆರವೇರಿಸುವುದಾಗಿ ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos