ಕೇರಳ ಹೊರತುಪಡಿಸಿ, ದಕ್ಷಿಣದಲ್ಲಿ ಹೆಣ್ಣು ಶಿಶು ಜನನ ಇಳಿಕೆ

ಕೇರಳ ಹೊರತುಪಡಿಸಿ, ದಕ್ಷಿಣದಲ್ಲಿ ಹೆಣ್ಣು ಶಿಶು ಜನನ ಇಳಿಕೆ

ಕೇಂದ್ರ ಸರ್ಕಾರದ ವರದಿ

ನವದೆಹಲಿ: ರಾಜ್ಯದಲ್ಲಿ ಲಿಂಗಾನುಪಾತದಲ್ಲಿ ದಿಢೀರ್ ಕುಸಿತ ಕಂಡಿದೆ, 2007ರಿಂದ 2016ರ ಅವಧಿಯಲ್ಲಿ ಲಿಂಗಾನುಪಾತದ ವರದಿಯಲ್ಲಿ ಕೇರಳ ಹೊರತುಪಡಿಸಿ ದಕ್ಷಿಣದಲ್ಲಿ ಹೆಣ್ಣು ಮಕ್ಕಳ ಜನನ ಪ್ರಮಾಣದಲ್ಲಿ
ಭಾರೀ  ಇಳಿಕೆಯಾಗಿದೆ.

ಹರ್ಯಾಣಾ,
ಪಂಜಾಬ್ ನಂತಹ ರಾಜ್ಯಗಳಲ್ಲಿ ಸಾಮಾನ್ಯವಾಗಿ ಲಿಂಗಾನುಪಾತದಲ್ಲಿ ಭಾರೀ ವ್ಯತ್ಯಾಸ ಇರುತ್ತದೆ. ಆದರೆ ಅಚ್ಚರಿ ಎಂಬಂತೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಗಂಡು ಮತ್ತು ಹೆಣ್ಣಿನ ಲಿಂಗಾನುಪಾತ ಭಾರಿ ಪ್ರಮಾಣದಲ್ಲಿ ಕುಸಿದಿದೆ ಎಂಬ ಅಂಶವನ್ನು ಕೇಂದ್ರ ಸರ್ಕಾರದ ವರದಿ ತಿಳಿಸಿದೆ.

2007ರಿಂದ 2016ರ ನಡುವೆ ದಕ್ಷಿಣ ಭಾರತದ ಕೇರಳ ಹೊರತುಪಡಿಸಿ, ಉಳಿದೆಲ್ಲಾ ರಾಜ್ಯಗಳಲ್ಲಿ ಲಿಂಗಾನುಪಾತ ಭಾರೀ ಪ್ರಮಾಣದಲ್ಲಿ ಕುಸಿದಿದೆ ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದಲ್ಲಿ ಗಂಡು ಮತ್ತು ಹೆಣ್ಣಿನ ಲಿಂಗಾನುಪಾತವು 1004ರಿಂದ 896ಕ್ಕೆ ಕುಸಿದಿದೆ. ಇನ್ನು 2013ರಲ್ಲಿ ಆಂಧ್ರಪ್ರದೇಶದಿಂದ ಪ್ರತ್ಯೇಕವಾಗಿ ಹೊರಹೊಮ್ಮಿದ ತೆಲಂಗಾಣದಲ್ಲಿ 954ರಷ್ಟಿದ್ದ ಹೆಣ್ಣುಮಕ್ಕಳ ಜನನ ಪ್ರಮಾಣ 881ಕ್ಕೆ ಕುಸಿದಿದೆ. ಅಲ್ಲದೆ ಆಂಧ್ರ ಪ್ರದೇಶದಲ್ಲಿಯೂ 971 ರಷ್ಟಿದ್ದ ಹೆಣ್ಣು ಮಕ್ಕಳ ಜನನವು 2016ರಲ್ಲಿ 806ಕ್ಕೆ ಕುಸಿದಿದೆ.

ಫ್ರೆಶ್ ನ್ಯೂಸ್

Latest Posts

Featured Videos