ಪೈಲೆಟ್ ಅಭಿನಂದನ್ ಬಿಡುಗಡೆಗೆ ಫಾತಿಮಾ ಭುಟ್ಟೋ ಆಗ್ರಹ

ಪೈಲೆಟ್ ಅಭಿನಂದನ್ ಬಿಡುಗಡೆಗೆ ಫಾತಿಮಾ ಭುಟ್ಟೋ ಆಗ್ರಹ

ವಾಷಿಂಗ್ಟನ್, ಫೆ.28, ನ್ಯೂಸ್ಎಕ್ಸ್ ಪ್ರೆಸ್: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಕೂಡಲೇ ಸುರಕ್ಷಿತವಾಗಿ ಬಿಡುಗಡೆ ಮಾಡಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ಅವರ ಮೊಮ್ಮಗಳು ಫಾತಿಮಾ ಭುಟ್ಟೋ ಮನವಿ ಮಾಡಿಕೊಂಡಿದ್ದಾರೆ.

ಪಾಕಿಸ್ತಾನದ ನಿರಂತರ ಸರ್ವಾಧಿಕಾರ ಆಡಳಿತ, ಭಯೋತ್ಪಾದನೆ, ಕಳಂಕದ ಇತಿಹಾಸವೇ ಇದೆ. ಪಾಕಿಸ್ತಾನದ ಯುವ ಜನಾಂಗ ಇದನ್ನೆಲ್ಲಾ ಸಹಿಸಿಕೊಳ್ಳುವುದು ಕಷ್ಟ ಎಂದು ಫಾತಿಮಾ ಭುಟ್ಟೋ ರವರ ಅಭಿಪ್ರಾಯ ತಿಳಿಸಿದ್ದಾರೆ.

ಭಾರತ ಮತ್ತು ಪಾಕ್ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ಮಿಗ್ 21 ವಿಮಾನವನ್ನು ಗುರಿ ಇಟ್ಟು ಪಾಕ್ ದಾಳಿ ನಡೆಸಲು ಮುಂದಾದ ವೇಳೆ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಕೆಳಕ್ಕೆ ಹಾರಿದ್ದರು. ಆದರೆ ಅವರು ಗಡಿ ನಿಯಂತ್ರಣ ರೇಖೆಯೊಳಗೆ ಇಳಿದ ಪರಿಣಾಮ ಪಾಕಿಸ್ತಾನದ ಸೇನೆ ಅಭಿನಂದನ್ ಅವರನ್ನು ಬಂಧಿಸಿತ್ತು.

ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಕೂಡಲೇ ಸುರಕ್ಷಿತವಾಗಿ ಬಿಡುಗಡೆ ಮಾಡಬೇಕೆಂದು ಭಾರತ ಒತ್ತಡ ಹೇರಿದೆ. ಅಲ್ಲದೇ ಜಿನಿವಾ ಒಪ್ಪಂದದಂತೆ ಬಂಧಿಸಲ್ಪಟ್ಟ ಅಭಿನಂದನ್ ಅವರಿಗೆ ಕಿರುಕುಳ ನೀಡಬಾರದು ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos