ಯಡಿಯೂರಪ್ಪ ಪಕ್ಷಾಂತರದ ಪಿತಾಮಹ: ಸಿದ್ದು

ಯಡಿಯೂರಪ್ಪ ಪಕ್ಷಾಂತರದ ಪಿತಾಮಹ: ಸಿದ್ದು

ಕೆಆರ್ ಪುರ, ಡಿ. 02: ಯಡಿಯೂರಪ್ಪ ಪಕ್ಷಾಂತರದ ಪಿತಾಮಹ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೆ.ಆರ್.ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣ ಸ್ವಾಮಿ ಪರ ಕ್ಷೇತ್ರದ ಹೊರಮಾವು, ಕಲ್ಕೆರೆ, ರಾಮಮೂರ್ತಿ ನಗರ, ಅಂಬೇಡ್ಕರ್ ನಗರ, ಮೇಡಿಹಳ್ಳಿ ಗ್ರಾಮ ಸೇರಿದಂತೆ ಹಲವಡೆ ರೋಡ್ ಶೋ ನಡೆಸಿ ಮಾತನಾಡಿದರು.

ನಮ್ಮ ಅಭ್ಯರ್ಥಿ ನಾರಾಯಣ ಸ್ವಾಮಿ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ, ಬೈರತಿ ಬಸವರಾಜಗೆ ಕಳೆದ ಚುನಾವಣೆಯಲ್ಲಿ ಹೊರಾಟ ಮಾಡಿ ಟಿಕೆಟ್ ಕೊಡಿಸಿದ್ದೆ, ಕಾಂಗ್ರೆಸ್ ನಿಂದ 2 ಬಾರಿ ಗೆದ್ದು ಲೂಟಿ ಮಾಡಿ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದು ದೂರಿದರು.

ಯಾಕೆ ಪಕ್ಷಾಂತರ ಆದರು, ಕಾಂಗ್ರೆಸ್ ನಲ್ಲಿ ಏನು ಕೊರತೆಯಿತ್ತು: ನಾನು ಮುಖ್ಯಮಂತ್ರಿಯಾದ ಸಂಧರ್ಭದಲ್ಲಿ ಕೆ.ಆರ್.ಪುರ ಕ್ಷೇತ್ರಕ್ಕೆ 2 ಸಾವಿರ ಕೋಟಿ ರೂ.ಗಳ ಅನುದಾನ ಕೊಟ್ಟಿದ್ದೇನೆ, ಕಾಂಗ್ರೆಸ್ ಬಿಟ್ಟು ಹೋಗುವ ಮುನ್ನ ಯಾರನ್ನಾದರೂ ಕೇಳಿದ್ದಾರಾ ಎಂದು ಪ್ರಶ್ನಿಸಿದರು.

ಒಂದು ವೇಳೆ ನಾನು ಬೈರತಿಗೆ ಟಿಕೆಟ್  ಕೊಡಸದಿದ್ದರೆ ಅವನು ಎಂದಿಗೂ ಶಾಸಕನಾಗುತ್ತಿರಲ್ಲಿಲ್ಲ, 15 ಕ್ಷೇತ್ರದ ಎಲ್ಲ ಅನರ್ಹ ಶಾಸಕರನ್ನು ಮತದಾರರು ಸೋಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇವರನ್ನು ಶಾಸಕರು ರಾಗಲು ನಾಲಾಯಕ್ ಎಂದು ಅನರ್ಹ ಮಾಡಿದ್ದು, ಸುಪ್ರೀಂ ಕೋರ್ಟ್ ಸಹಾ ಇವರನ್ನು ನಾಲಾಯಕ್ ಎಂದು ತೀರ್ಪನ್ನು ಕೊಟ್ಟಿದ್ದರು ಜನಾದೇಶಕ್ಕೆ ಮುಂದೆ ಬಂದಿದ್ದಾರೆ, ಇಂತಹ ಮೋಸಗಾರರಿಗೆ ತಕ್ಕ ಪಾಠ ಕಳುಸಬೇಕು ಎಂದರು.

ಕಳೆದ ಕಾಂಗ್ರೇಸ್ ಸರ್ಕಾರದ 5 ವರ್ಷಗಳ ಆಡಳಿತದಲ್ಲಿ ಇಂದಿರಾ ಕ್ಯಾಂಟಿನ್, ವಿದ್ಯಾಸಿರಿ, ಅನ್ನಭಾಗ್ಯ, ಕ್ಷೀರಭಾಗ್ಯದಂತ ಅನೇಕ ಜನಪರ ಯೋಜನೆ ಕೊಟ್ಟಿದ್ದೇನೆಂದು ಹೇಳಿದರು.

ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮೇಡಹಳ್ಳಿ ರಾಕೇಶ್ ಹಾಗೂ ಅವರ ಸಂಗಡಿಗರಿಂದ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಅಭ್ಯರ್ಥಿ ನಾರಾಯಣ ಸ್ವಾಮಿ ಅವರಿಗೆ ಬೃಹತ್‌ ಆಪಲ್ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಿದರು.

ಈ ಸಂಧರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಮಾಜಿ.ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವರಾದ ರಾಮಲಿಂಗರೆಡ್ಡಿ, ಕೆ.ಜೆ.ಜಾರ್ಜ್, ಐವನ್ ಡಿಸೋಜಾ, ಮುಖಂಡರಾದ ಡಿ.ಕೆ.ಮೋಹನ್ ಬಾಬು, ಶಾಂತ ಕುಮಾರ್, ನದೀಂ, ಅಂಜಿನಪ್ಪ, ಸುನೀಲ್ ಸೇರಿದಂತೆ ಇತರರು ಹಾಜದ್ದರು.

ಫ್ರೆಶ್ ನ್ಯೂಸ್

Latest Posts

Featured Videos