ತಂದೆ ಕೆಲಸ ಮಾಡಿದ ಫ್ಯಾಕ್ಟರಿಯಲ್ಲಿ ಪ್ರಜ್ವಲ್ ಶೂಟಿಂಗ್ !

ತಂದೆ ಕೆಲಸ ಮಾಡಿದ ಫ್ಯಾಕ್ಟರಿಯಲ್ಲಿ ಪ್ರಜ್ವಲ್ ಶೂಟಿಂಗ್ !

ಬೆಂಗಳೂರು, ಮೇ.  22, ನ್ಯೂಸ್ ಎಕ್ಸ್ ಪ್ರೆಸ್: ತಂದೆ ದೇವರಾಜ್‌ ಕೆಲಸ ಮಾಡಿದ್ದ ಫ್ಯಾಕ್ಟರಿಯಲ್ಲಿ ನಟ ಪ್ರಜ್ವಲ್‌ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಮಾಡಲಾಗಿದೆ.  ಫ್ಯಾಕ್ಟರಿಯಲ್ಲೇ ದೇವರಾಜ್‌ 30 ವರ್ಷದ ಹಿಂದೆ ಕೆಲಸ ಮಾಡಿದ್ದು. ಇದು ಪ್ರಜ್ವಲ್‌ಗೆ ರೋಮಾಂಚನವನ್ನುಂಟು ಮಾಡಿದೆ.

ಫ್ಯಾಕ್ಟರಿ ಮುಂದೆ ನಿಂತು ಫೋಟೋ ತೆಗೆಸಿಕೊಂಡಿರುವ ಅವರು, ‘’ ಇಂದು ನಾನು ಅನುಭವಿಸುತ್ತಿರುವ ಪ್ರತಿಯೊಂದು ಕ್ಷಣವೂ ನನ್ನ ತಂದೆಯ ಕಷ್ಟದ ಫಲ. ದೊಡ್ಡ ಕನಸನ್ನು ಇಟ್ಟುಕೊಂಡಿದ್ದರೂ, ಮುಂದೊಂದು ದಿನ ತಾವು ದೊಡ್ಡ ನಟನಾಗುತ್ತೇನೆಂದಾಗಲಿ, ತಮ್ಮ ಮಗ ನಟನಾಗುತ್ತಾನೆಂದಾಗಲಿ, ಮುಂದೊಂದು ದಿನ ಇದೇ ಫ್ಯಾಕ್ಟರಿಯಲ್ಲಿ ಮಗ ಶೂಟಿಂಗ್‌ ಮಾಡುತ್ತಾನೆಂದಾಗಲಿ ಅವರು ಕಲ್ಪಿಸಿಕೊಂಡಿರಲಿಕ್ಕೂ ಸಾಧ್ಯವಿಲ್ಲ. ಅದೇ ಜೀವನ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos