ರೈತನ ಬಾಳು ಬಂಗಾರ

ರೈತನ ಬಾಳು ಬಂಗಾರ

ದೇವನಹಳ್ಳಿ, ಸೆ. 15: ಆತ ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ ಪಡೆದು ಕೆಲಸ ಮಾಡ್ತಿರೋ ಯುವಕ… ತಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು ಕೃಷಿ ಬಿಡದ ಚಲಗಾರ…. ಓದಿ ಪದವಿ ಪಡೆದರು ಕೃಷಿ ಬಿಡದೇ ರೈತರಿಗೆಲ್ಲಾ ಮಾದರಿಯಾಗಿದ್ದಾನೆ.

ಹೀಗೆ ಸಂಪಾಗಿ ಉತ್ತಮ ಇಳುವರಿಯಿಂದ ಬೆಳೆದು ನಿಂತಿರೋ ಹುರಳಿಕಾಯಿ.. ತನ್ನ ದಿನನಿತ್ಯದ ಖಾಸಗಿ ಕಂಪನಿ ಕೆಲಸ ಮಾಡ್ತಿದ್ರು  ಕೃಷಿಯಲ್ಲಿ ಒಳ್ಳೆಯ ರೀತಿಯಲ್ಲಿ ಬೆಳೆದಿರೋ ಈ ಸಂಪಾದ ಹುರಳಿ ಗಿಡ ಇರೋದು ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಎಮರಹಳ್ಳಿ ಗ್ರಾಮದಲ್ಲಿ.

ಗ್ರಾಮದ ಯುವ ರೈತ ಶಿವಕುಮಾರ್ ಪದವಿ ಪಡೆದಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗ್ತಿದ್ದಾರೆ. ಆದ್ರೆ ಕೆಲಸಕ್ಕೆ ಹೋದರು ತಾನು ಕೃಷಿ ಬಿಡಬಾರದೆಂದು ತಮ್ಮ ತೋಟದ ಒಂದು ಎಕರೆ ಭೂಮಿಯಲ್ಲಿ ಸಂಪಾದ ಉತ್ತಮ ಇಳುವರಿವುಳ್ಳ ಹುರಳಿ ಕಾಯಿಯನ್ಮ ಬೆಳೆದಿದ್ದಾನೆ. ತನ್ನ ಭೂಮಿಗೆ ಕೆರೆಮಣ್ಣನ್ನ ಹಾಕಿರೋ ಯುವ ರೈತ ಸಾಲುಗಳನ್ನ ಕಟ್ಟಿ ಹುರಳಿ ಗಿಡಗಳನ್ನ ಬೆಳದಿದ್ದು, ಉತ್ತಮ ಇಳುವರಿ ಬಂದಿದೆ. ಹೀಗಾಗಿ ಈತ ಬೆಳೆದಿರೋ ಹುರಳಿ ಕಾಯಿ ನೋಡಲು ಗ್ರಾಮದ ಸುತ್ತಮುತ್ತಲ ಜನ ಮುಗಿ ಬಿಳ್ತಿದ್ದಾರೆ. ಅಲ್ಲದೆ ನೈಸರ್ಗಿಕ ಗೊಬ್ಬರ ಪದ್ದತಿ ಮೂಲಕ ಬೆಳೆ ಬೆಳೆದಿದ್ದು, ಒಂದುವರೆ ಲಕ್ಷ ಬೆಳೆಗೆ ಖರ್ಚು ಮಾಡಿ ಸುಮಾರು ಐದು ಲಕ್ಷ ಆದಾಯವನ್ನ ರೈತ ಪಡೆದಿದ್ದಾನೆ.

ತಾನು ಕಂಪನಿಯಲ್ಲಿ ಕೆಲಸಕ್ಕೂ ಸೈ ,ಕೃಷಿಗೂ ಸೈ ಎನ್ನಿಸಿಕೊಂಡಿರೋ ಯುವ ರೈತ ಶಿವಕುಮಾರ್ ದೇವನಹಳ್ಳಿ ತಾಲೂಕಿನ ರೈತರಿಗೆ ಮಾದರಿಯಾಗಿದ್ದಾನೆ. ಇನ್ನೂ ಪ್ರತಿನಿತ್ಯ ಕೃಷಿ ಬಗ್ಗೆ ಹೆಚ್ಚು ಕಾಳಜಿವಹಿಸಿರೋ ಯುವ ರೈತನ ಬಳಿ ಬೆಳೆಗಳನ್ನ ಇಡೋ ಹಲವು ರೈತರು ಬಂದು ಸಲಹೆಗಳನ್ನ ಪಡೆಯುತ್ತಾರೆ.

ಶ್ರಮವಹಿಸಿ ದುಡಿದರೆ ಯಾವೊಬ್ಬ ರೈತರು ಕೃಷಿಯಲ್ಲಿ ಹಾಳಾಗೋದಿಲ್ಲ. ನನಗೆ ಕೃಷಿ ಮಾಡಲು ಸಾಕಷ್ಟು ಹುಮ್ಮಸ್ಸಿದ್ದು, ಇನ್ನಷ್ಟು ಬೆಳೆಗಳನ್ನ ಉತ್ತಮ ರೀತಿಯಲ್ಲಿ ಬೆಳೆಯಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ.

ಯುವ ರೈತ ಶಿವಕುಮಾರ್ ತಾನು ಮಾಡುವ ಕೆಲಸ ಶ್ರದ್ದೆಯಿಂದ ಮಾಡ್ತಾರೇ. ಜತೆಗೆ ಯಾವುದೇ ಬೆಳೆ ಇಟ್ಟರು ಅದಕ್ಕೆ ಪೂರಕವಾಗಿ ಸಮಯ ತಕ್ಕಂತೆ ಗಿಡಗಳನ್ನ ಪೋಷಿಸ್ತಾರೇ. ಹೀಗಾಗಿ ಉತ್ತಮ ಫಸಲು ಬರುತ್ತಿದೆ. ಈ ಯುವ ರೈತ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು, ಸ್ಥಳೀಯರಾದ ಶ್ಯಾಂ ಮಂಜು ತಿಳಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos