‘ರೈತರ ಮೇಲಿನ ಲಾಠಿ ಚಾರ್ಜ್ ಖಂಡನೀಯ’

‘ರೈತರ ಮೇಲಿನ ಲಾಠಿ ಚಾರ್ಜ್ ಖಂಡನೀಯ’

ಶಹಾಪುರ: ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಲು ದೆಹಲಿಯಲ್ಲಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಕೇಂದ್ರ ಸರ್ಕಾರವು ದಮನ ರೀತಿಯಲ್ಲಿ ನಡೆದುಕೊಂಡಿದ್ದು. ರೈತರ ಮೇಲೆ ಲಾಠಿ ಚಾರ್ಜ್ ನಡೆಸಿದ ಪೊಲೀಸರ ಮೇಲೆ ಕೊಲೆ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಠ ಆಗ್ರಹಿಸಿದರು.

ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆಯ ನಡೆಸಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತಾನಾಡಿದ ಅವರು ಪೊಲೀಸರ ಲಾಠಿ ಚಾರ್ಜ್‍ನಿಂದ ತಲೆಗೆ ಬಲವಾದ ಪೆಟ್ಟು ಬಿದ್ದು ಕೇಲ ರೈತರು ಮೃತಪಟ್ಟಿದ್ದು. ಮೃತ ರೈತ ಕುಟುಂಬಗಳಿಗೆ 30 ಲಕ್ಷ ರೂ ಪರಿಹಾರ ನೀಡಬೇಕು.

ಈ ವೇಳೆ ಎಸ್.ಎಂ ಸಾಗರ್, ಶರಣು ಮಂದ್ರವಾಡ, ಮಲ್ಕಣ್ಣ ಚಿಂತಿ, ಹಣಮಂತ್ರಾಯಗೌಡ, ವಿಜಯ್ ರಾಠೋಡ್, ಶಿವಪ್ಪ ಸೇರಿದಂತೆ ರೈತರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos