ತಿನ್ನುವ ತುತ್ತಿನಲ್ಲೂ ರೈತರ ಬೆವರಿದೆ

ತಿನ್ನುವ ತುತ್ತಿನಲ್ಲೂ ರೈತರ ಬೆವರಿದೆ

ಹುಳಿಯಾರು: ರೈತರಿಗೆ ಮರಣ ಶಾಸನವಾದ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳನ್ನು ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿದ್ದು ಈ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯುವವರೆಗೆ ರೈತ ಸಂಘ ಚಳುವಳಿ ಮುಂದುವರಿಸುತ್ತದೆ ಎಂದು ರಾಜ್ಯ ರೈತ ಸಂಘದ ಹೊಸಳ್ಳಿ ಚಂದ್ರಪ್ಪ ಬಣದ ರಾಜ್ಯಾಧ್ಯಕ್ಷ ಹೊಸಳ್ಳಿ ಚಂದ್ರಪ್ಪ ಎಚ್ಚರಿಕೆ ನೀಡಿದರು.
ಹುಳಿಯಾರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿ, ರೈತರಿಗಷ್ಟೇ ಜಮೀನು ಎಂದಿದ್ದ ಭೂ ಸುಧಾರಣಾ ಕಾಯ್ದೆಯನ್ನು ಸಡಿಲಗೊಳಿಸಿ ಹಣವಂತರ, ಕಪ್ಪುಹಣ ಇರುವ ಭ್ರಷ್ಟ ಕಾರ್ಪೊರೇಟ್ ಕಂಪನಿಗಳಿಗೆ ಕೃಷಿ ಭೂಮಿಯನ್ನು ಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ರೈತರಿಗೆ ಉಳಿಗಾವಿಲ್ಲ ಎನ್ನುವ ಸ್ಥಿತಿ ನಿರ್ಮಾಣ ಮಾಡಿದೆ.
ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಕಾನೂನನ್ನು ಜಾರಿಗೆ ತಂದು ಸಣ್ಣಸಣ್ಣ ಹಿಡುವಳಿದಾರರನ್ನು ಒಕ್ಕಲೆಬ್ಬಿಸುವ ಹಾಗೂ ರೈತರುಗಳನ್ನು ಉಳ್ಳವರ ಗುಲಾಮರನ್ನಾಗಿ ಮಾಡಲಿಕ್ಕೆ ಹೊರಟಿದೆ. ಇದರಿಂದ ಮುಂದಿನ ದಿನಗಳಲ್ಲಿ ಸತ್ತ ರೈತರಿಗೆ ಶವಸಂಸ್ಕಾರಕ್ಕೂ ಭೂಮಿ ಇಲ್ಲದಾಗುತ್ತದೆ ಎಂದರು.

ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವವರೆಗೂ ಇಡೀ ಕರ್ನಾಟಕ ರಾಜ್ಯದ ರೈತ ಸಂಘ ಸರ್ಕಾರದ ವಿರುದ್ಧ ನಿಂತಿರುತ್ತದೆ. ಇಲ್ಲದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಬೇರು ಸಮೇತ ಕಿತ್ತೊಗೆಯಲು ರೈತರು ಕಾರಣಿಕರ್ತರಾಗುತ್ತಾರೆ ಎಂಬುದನ್ನು ಅರಿಯಿರಿ ಎಂದರು. ಸೆ.28ರಂದು ಕರ್ನಾಟಕ ಬಂದ್ ಗೆ ಇಡೀ ರಾಜ್ಯದ ರೈತ ಸಂಘ ಕರೆ ಕೊಟ್ಟಿದ್ದು ನಾವು ಸಹ ಅಂದಿನ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos