`ಬೇಡಿಕೆಗಳ ಈಡೇರಿಕೆಗಾಗಿ ಸಚಿವರಿಗೆ ರೈತರ ಮನವಿ’

`ಬೇಡಿಕೆಗಳ ಈಡೇರಿಕೆಗಾಗಿ ಸಚಿವರಿಗೆ ರೈತರ ಮನವಿ’

ಶಹಾಪುರ: ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಹೊಸ ಸದಸ್ಯರಿಗೆ ೨೫೦೦೦ರೂ ಸಾಲ ವಿತರಿಸುತ್ತಿದ್ದು ಅವೈಜ್ಞಾನಿಕವಾಗಿದೆ. ವಾಣಿಜ್ಯ ಬ್ಯಾಂಕುಗಳಂತೆ ಎಕರೆಗೆ ೫೦.೦೦೦ರೂ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಸಂಚಾಲಕರಾದ ಮಲ್ಲಣ್ಣಗೌಡ ಪರಿವಾಣ ಅವರು ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ ಸೋಮಶೇಖರ ಅವರಿಗೆ ಮನವಿ ಮಾಡಿದರು. ಶನಿವಾರ ನಗರಕ್ಕೆ ಆಗಮಿಸಿದ್ದ ವೇಳೆ ಮನವಿ ಪತ್ರ ಸಲ್ಲಿಸಿ ಮಾತಾನಾಡಿದ ಅವರು ತೊಗರಿಗೆ ೧೦.೦೦೦ರೂ ಹತ್ತಿಗೆ ೧೨.೦೦೦ರೂ ಬತ್ತಕ್ಕೆ ೪.೦೦೦ರೂ ನಂತೆ ಬೆಂಬಲ ಬೆಲೆ ಕೊಟ್ಟು ಸರ್ಕಾರವೇ ಖರೀದಿಸಬೇಕು.
ಕಲಬುರಗಿ , ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕನ್ನು ವಿಭಜಿಸಿ ಯಾದಗಿರಿಯಲ್ಲಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕನ್ನು ಸ್ಥಾಪಿಸಬೇಕು. ಬಹುತೇಕ ರೈತರು ಫಸಲ್ ಭೀಮಾ ಯೋಜನೆಯಿಂದ ವಂಚಿತರಾಗಿದ್ದು ತಾಲೂಕಿನ ರೈತರ ತಂತ್ರಾಂಶದಲ್ಲಿರುವ ಬೆಳೆ ಕಟಾವು ಪ್ರಯೋಗದ ಫೋಟೋ ಪರಿಶೀಲಿಸಿ ಪರಿಹಾರ ನೀಡಬೇಕು.

ಖಾಸಗಿ ಬೆಳೆ ವಿಮೆ ಕಂಪನಿಗಳು ಸರಕಾರಿ ನೌಕರದಾರರು ಶಾಮಿಲಾಗಿ ಸರಾಸರಿ ಇಳುವರಿಯನ್ನು ತಿರುಚಿ ರೈತರ ಹಣವನ್ನು ಲೂಟಿ ಮಾಡುತ್ತಿದ್ದಾರೆ ಆದ್ದರಿಂದ ಸರ್ಕಾರವೆ ಬೆಳೆ ವಿಮೆ ಕಂಪನಿಯನ್ನು ಸ್ಥಾಪನೆ ಮಾಡಬೇಕು. ೨೦೧೬-೧೭ ನೇ ಸಾಲಿನಲ್ಲಿ ಕೃಷಿ ಪತ್ತೀನ ಸಹಕಾರಿ ಸಂಘದಲ್ಲಿ ಹೊಸ ಸದಸ್ಯರಿಗೆ ಮಂಜುರಾಗಿದ್ದ ಸಾಲ ಹಾಗೂ ಸಮ್ಮಿಶ್ರ ಸರ್ಕಾರದ ಸಾಲ ಮನ್ನದ ಹಣವು ಇಲ್ಲಿಯವರೆಗೆ ರೈತರಿಗೆ ತಲುಪಿಲ್ಲಾ ಆದ್ದರಿಂದ ತಕ್ಷಣ ಕ್ರಮ ತೆಗೆದುಕೊಳ್ಳಬೇಕು.

ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿ ದರದಲ್ಲಿ ಕೈಸಾಲ ಮಾಡಿಕೊಂಡು ಸಾಲ ಮರುಪಾವತಿ ಮಾಡಲಾಗದೇ ರೈತರು ಆತ್ಮಹತ್ಯೇ ಮಾಡಿಕೊಳ್ಳುತ್ತಿದ್ದು ವಾಣಿಜ್ಯ ಬ್ಯಾಂಕುಗಳಲ್ಲಿ ಹಾಗೂ ಸಹಕಾರಿ ಸಂಘ ಯಾವುದೇ ಷರತ್ತುಗಳಿಲ್ಲದೇ ಕೇವಲ ರೈತರ ಪಾಹಣಿ ಪತ್ರಿಕೆ ತೆಗೆದುಕೊಂಡು ಸರಳವಾಗಿ ಸಾಲ ಸೀಗುವಂತೆ ಮಾಡಬೇಕೆಂದು ಮನವಿ ಪತ್ರ ಸಲ್ಲಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos