ಮೈಕ್ರೋ ಫೈನಾನ್ಸ್ ಹಿಂಸೆಗೆ ರೈತ ಮಹಿಳೆ ಆತ್ಮಹತ್ಯೆ..!

ಮೈಕ್ರೋ ಫೈನಾನ್ಸ್ ಹಿಂಸೆಗೆ  ರೈತ ಮಹಿಳೆ ಆತ್ಮಹತ್ಯೆ..!

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಂಗಲಿ ಗ್ರಾಮದ ರೈತ ಮಹಿಳೆ ದೇವೀರಮ್ಮ ಆತ್ಮಹತ್ಯೆಗೆ ಶರಣಾಗಿದ್ದಾಳೆ. ರಾಜ್ಯದ್ಯಂತ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾನವಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ, ಈ ನಿಟ್ಟಿನಲ್ಲಿ ಬೆಳೆ ಸಂಪೂರ್ಣನಾಶವಾಗಿದ್ದು ರೈತ ಖುಷಿ ಸಲವಾಗಿ ಸಾಲ ಸೂಲ ಮಾಡಿ ಬೆಳೆ ನಾಟಿ ಮಾಡಿದ್ದಾನೆ,ಆದರೆ ಕೃಷಿಗೆ ತಕ್ಕಂತೆ ಮಳೆ ಬಾರದೆ ಸಂಕಟದಿಂದ ತಾನು ಬೆಳೆದ ಬೆಳೆಯನ್ನು ತಾನೇ ಕಿತ್ತಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದರ ಬೆನ್ನಲ್ಲೇ ಸಾಲ ತೀರಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನೀಡಿದ ಹಿಂಸೆಗೆ ತಾಳಲಾರದೆ ಬೇಸತ್ತ ರೈತ ಮಹಿಳೆ ಜಿಲ್ಲೆಯ ಕಡೂರು ತಾಲೂಕಿನ ತಂಗಲಿ ಗ್ರಾಮದಲ್ಲಿ.
ದೇವೀರಮ್ಮ ಆತ್ಮಹತ್ಯೆ ಮಾಡಿಕೊಂಡಘಟನೆ ನಡೆದಿದೆ, ನತದೃಷ್ಟಿ ರೈತ ಮಹಿಳೆ. ಕಡೂರಿನ ಗ್ರಾಮೀಣ ಕೂಟ ಫೈನಾನ್ಸ್ 78 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಬೆಳೆ ನಷ್ಟದಿಂದ ಅರ್ಥಿಕ ಸಂಕಷ್ಟಕ್ಕೆ ಸಿಲುಕಿ ಒಂದು ತಿಂಗಳಿನಿಂದ ಮೈಕ್ರೋ ಫೈನಾನ್ಸ್ ನ ಸಾಲದ ಕಂತನ್ನ ಕಟ್ಟಿರಲಿಲ್ಲ̤
ಕೆಲವು ವಾರಗಳು ಫೈನಾನ್ಸ್ಗೆ ಸಾಲ ಕಟ್ಟಡ ಹಿನ್ನೆಲೆ ದೇವೀರಮ್ಮ ಅವರ ಮನೆ ಬಳಿ ಬಂದು ಕಿರುಕುಳ ನೀಡಿದ ಆರೋಪ ಫೈನಾನ್ಸ್ ಸಿಬ್ಬಂದಿ ವಿರುದ್ಧ ಕೇಳಿಬಂದಿದೆ. ಈ ಪ್ರಕರಣ ಸಂಬಂಧ ಗ್ರಾಮಿಣ ಕೂಟ ಫೈನಾನ್ಸ್ ಸಿಬ್ಬಂದಿ ಶಂಕರ್ ನಾಯಕ್, ಉಷಾ, ರುಬೀನಾ‌ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವರದಿಗಾರ
ಎ ಚಿದಾನಂದ

ಫ್ರೆಶ್ ನ್ಯೂಸ್

Latest Posts

Featured Videos