ಮಂಡ್ಯದಲ್ಲಿ ನಿಲ್ಲದ ರೈತರ ಆತ್ಮಹತ್ಯಾ ಸರಣಿ…!

ಮಂಡ್ಯದಲ್ಲಿ ನಿಲ್ಲದ ರೈತರ ಆತ್ಮಹತ್ಯಾ ಸರಣಿ…!

ಮಂಡ್ಯ, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯದಲ್ಲಿ ಚುನಾವಣೆಯ ಭರಾಟೆ ಸಾಗಿದ್ದು, ಎಲ್ಲರೂ ತಾವು ರೈತರ ಪರವಾಗಿದ್ದೇವೆ ಎಂದು ಘೋಷಿಸಿಕೊಳ್ಳುತ್ತಾ ರೈತರನ್ನು ಸೆಳೆಯುತ್ತಿದ್ದರೆ ಇತ್ತ ರೈತರ ಆತ್ಮಹತ್ಯೆ ಪ್ರಕರಣಗಳು ಮಾತ್ರ ನಿಲ್ಲುವಂತೆ ಕಾಣುತ್ತಿಲ್ಲ. ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ ಚುನಾವಣೆ ಘೋಷಣೆಯಾದ ಬಳಿಕವೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಯಾರೂ ಕೂಡ ಈ ಬಗ್ಗೆ ಮಾತನಾಡದೆ ಕೇವಲ ರೈತರ ಪರ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಚುನಾವಣಾ ಸಮಯದಲ್ಲಿಯೇ ಮಂಡ್ಯದಲ್ಲಿ ರೈತ ಆತ್ಮಹತ್ಯೆ ಇದೀಗ ತಾಲೂಕಿನ ಅರೆತಿಪ್ಪೂರು ಗ್ರಾಮದ ನಿವಾಸಿ ರಾಜೇಗೌಡನ ಎಂಬುವರ ಪುತ್ರ ಕೆಂಪರಾಜು(65) ಎಂಬುವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತ ಕೆಂಪರಾಜು ಅವರು 2 ಎಕರೆ ಜಮೀನು ಹೊಂದಿದ್ದು, ಒಂದು ಎಕರೆ ಕಬ್ಬು ಮತ್ತು ಒಂದು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದರು. ಇದಕ್ಕಾಗಿ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಹಾಗೂ ಖಾಸಗಿ ವ್ಯಕ್ತಿಗಳಿಂದ 3 ಲಕ್ಷ ರೂ.ಕೈ ಸಾಲ ಮಾಡಿಕೊಂಡಿದ್ದರು. ವಿಚಿತ್ರ ಘಟನೆ: ತಹಸೀಲ್ದಾರ್ ಲಂಚ ಕೇಳಿದ್ದಕ್ಕೆ ರೈತ ಮಾಡಿದ್ದೇನು ಗೊತ್ತಾ? ಈ ನಡುವೆ ಬೆಳೆದ ಬೆಳೆಗೆ ನೀರಿಲ್ಲದ ಕಾರಣ ಒಣಗಿದ್ದು, ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ನಷ್ಟಹೊಂದಿದ್ದರು. ಅಲ್ಲದೇ ಸಾಲಗಾರರು ಕೂಡ ಹಣ ವಾಪಾಸ್ ನೀಡುವಂತೆ ಒತ್ತಾಯಿಸತೊಡಗಿದ್ದರು. ಇದರಿಂದ ನೊಂದ ಅವರು ಸಾಲಗಾರರಿಗೆ ಹೆದರಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos