ರೈತನಿಗೆ ಮೋಸ ಆದ್ರೆ ಸುಮ್ನೆ ಇರಲ್ಲ : ದರ್ಶನ್

ರೈತನಿಗೆ ಮೋಸ ಆದ್ರೆ ಸುಮ್ನೆ ಇರಲ್ಲ : ದರ್ಶನ್

ಬೆಂಗಳೂರು, ಡಿ. 1 :  ಅಧಿಕಾರ ಇವತ್ತು ಒಬ್ಬರತ್ರ, ನಾಳೆ ಇನ್ನೊಬ್ಬರ ಹತ್ರ ಇರುತ್ತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಒಡೆಯ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ನಟ ದರ್ಶನ್ ಎರಡು ದಿನದ ಹಿಂದೆ ಇಂದು ಟ್ರೈಲರ್ ರಿಲೀಸ್ ಮಾಡುವುದಾಗಿ ತಿಳಿಸಿದ್ದರು. ಅದರಂತೆಯೇ ಆನಂದ್ ಆಡಿಯೋ ಯೂಬ್ಯೂಟ್‍ನಲ್ಲಿ ಟ್ರೇಲರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.

“ನಮ್ಮ ಜೊತೆ ಇರುವವರನ್ನು ನಾವು ಚೆನ್ನಾಗಿ ನೋಡಿಕೊಂಡರೆ, ಮೇಲೆ  ಇರುವವನು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ” ಎಂಬ ಡೈಲಾಗ್ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ. ಮನೆಗೆ ದೊಡ್ಡ ಮಗನಾಗಿ ತನ್ನ ತಮ್ಮಂದಿರನ್ನು ಪ್ರೀತಿಯಿಂದ ನೋಡಿಕೊಳ್ಳುವ ಒಡೆಯನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos