ರೈತರ ‘ಚಡ್ಡಿ’ ಅಮೇರಿಕದಲ್ಲೂ ಸದ್ದು

ರೈತರ ‘ಚಡ್ಡಿ’ ಅಮೇರಿಕದಲ್ಲೂ ಸದ್ದು

ಬೆಂಗಳೂರು, ಜು. 9 : ಇದೀಗ ರೈತರ ಪಟಾಪಟಿ ಚಡ್ಡಿ ದೂರದ ಅಮೆರಿಕದಲ್ಲೂ ಸದ್ದು ಮಾಡಿದೆ.
ದೇವೇಗೌಡರು ಪ್ರಧಾನಿಯಾಗುತ್ತಿದ್ದಂತೆ ದೇಶದೆಲ್ಲೆಡೆ ರಾಗಿಮುದ್ದೆಯದ್ದೇ ಮಾತು. ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಅದರಲ್ಲೂ ಅಪ್ಪಟ ಕನ್ನಡಿಗರು ತಾವು ನೆಲೆಸಿರುವ ದೇಶದಲ್ಲೇ ತಮ್ಮ ಮೂಲ ಕಸುಬಾದ ಕೃಷಿ ಮುಂದುವರಿಸಿಕೊಂಡು ನಾವೆಲ್ಲಿದ್ದರೂ ಮಣ್ಣಿನ ಮಕ್ಕಳೇ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಶಾಂತರಾಜ್ ಕೆ., ಶ್ಯಾಮ್ ಆರ್., ಶಶಿ, ಶರತ್, ರಮೇಶ್ಗೌಡ, ಸಾಯಿಗೌಡ, ಸಂಜೀವ, ಅಮರನಾಥ್ಗೌಡ, ರಾಜು, ರಮೇಶ್ಗೌಡ, ಶೇಷಾದ್ರಿ, ಹರೀಶ್, ಶ್ರೀಕಾಂತ್, ಬಸವರಾಜು, ನಾಗೇಶ್, ಮಹದೇವಸ್ವಾಮಿ, ರವಿ ಕೊಳ್ಳೇಗಾಲ, ಮಧು ಆರ್., ಮಾದೇಶ್, ಜಯಗೌಡ ಮತ್ತಿತರರು ಉದ್ಯೋಗ ಅರಸಿ ದೂರದ ಅಮೆರಿಕಕ್ಕೆ ತೆರಳಿ ಐಟಿ-ಬಿಟಿ ಉದ್ಯೋಗಿಗಳಾಗಿ ಜೀವನ ಕಂಡುಕೊಂಡಿದ್ದಾರೆ.
ಐಟಿ-ಬಿಟಿಯಿಂದ ಕೈ ತುಂಬ ಸಂಬಳ ಪಡೆದು ನೆಮ್ಮದಿ ಜೀವನ ಸಾಗಿಸುತ್ತಿರುವ ಇವರಿಗೆಲ್ಲ ತಮ್ಮ ಮೂಲ ಕೃಷಿಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾವು ವಾಸಿಸುತ್ತಿರುವ ದೇಶದಲ್ಲೇ ಜಮೀನು ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅಮೆರಿಕದಲ್ಲಿರುವ ಕನ್ನಡಿಗರು ಕೃಷಿಯನ್ನು ಮರೆತಿಲ್ಲ ಎನ್ನುವುದನ್ನು ಇಡೀ ವಿಶ್ವಕ್ಕೆ ತೋರಿಸಬೇಕೆಂಬ ಉದ್ದೇಶದಿಂದ ಇತ್ತೀಚೆಗೆ ಅಮೆರಿಕದಲ್ಲಿ ಕೃಷಿ ಬಗ್ಗೆ ಕಾಳಜಿ ಇರುವಂತಹ ಕಾರ್ಯಕ್ರಮ ರೂಪಿಸಿ ಎಲ್ಲರೂ ಭಾರತೀಯ ರೈತರಂತೆ ಪಟಾಪಟಿ ಚಡ್ಡಿ, ಅಂಗಿ ತೊಟ್ಟು ಗಮನ ಸೆಳೆದರು.

ಫ್ರೆಶ್ ನ್ಯೂಸ್

Latest Posts

Featured Videos