ಮೈಸೂರಿನ ಭಾಗದ ರೈತರಗೆ ಮಂದಹಾಸ

 ಮೈಸೂರಿನ ಭಾಗದ ರೈತರಗೆ ಮಂದಹಾಸ

ಮೈಸೂರು, ಜೂನ್. 3: ದೆಹಲಿ, ರಾಜಸ್ತಾನ ಸೇರಿದಂತೆ ಉತ್ತರ ಭಾರತದ  ಹಲವು ರಾಜ್ಯಗಳಲ್ಲಿ ಬಿಸಿಲ ತಾಪಾಮಾನ ಏರಿಕೆಯಾಗಿದೆ, ಹೀಗಾಗಿ ಮಂಡ್ಯ, ಮೈಸೂರು ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಪ್ರತಿ ಎಳನೀರಿನ ಬೆಲೆ 32 ರು ತಲುಪಿದೆ, ಮದ್ದೂರು ಬಹುದೊಡ್ಡ ಎಳನೀರು ಮಾರುಕಟ್ಟೆಯಾಗಿದೆ, ಪ್ರತಿದಿನ  60ರಿಂದ 80 ಟ್ರಕ್ ಅಂದರೆ ಸುಮಾರು 8 ಲಕ್ಷ ಎಳನೀರನ್ನು ದೇಶದ ಹಲವು ಭಾಗಗಳಿಗೆ ಪೂರೈಸಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಪಾಂಡವಪುರ, ಗೌಡಹಳ್ಳಿ, ಮಂಡ್ಯ ಮತ್ತು ಮತ್ತು ಚನ್ನರಾಯಪಟ್ಟಣ ಮಾರುಕಟ್ಟೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಮೈಸೂರು ಭಾಗದಲ್ಲಿ ಬಿಸಿಲ ತಾಪ ಹೆಚ್ಚುತ್ತಿರುವ ಕಾರಣದಿಂದಾಗಿ ಏಳನೀರಿಗೆ ಬೇಡಿಕೆ ಹೆಚ್ಚಾಗಿದ್ದು ಪರಿಣಾಮ ದರ ಕೂಡ ಏರಿದೆ.

ಈ ಮೊದಲು ಇಲ್ಲಿನ ರೈತರು ತಾವೇ ನೇರವಾಗಿ 15 ರಿಂದ 18 ರು ಗೆ ಮಾರಾಟ  ಮಾಡುತ್ತಿದ್ದರು. ಈಗ  4 ಸಾವಿರ ಎಳನೀರನ್ನು ಮಾರುಕಟ್ಟೆಗೆ ತಂದಿರುವುದರಿಂದ ಕಮಿಷನ್, ಸಾಗಣೆ ವೆಚ್ಚ ಎಲ್ಲಾ ಕಳೆದು ಪ್ರತಿ ಎಳನೀರಿಗೆ 27 ರು ಸಿಗುತ್ತಿದೆ ಎಂದು ರೈತರೊಬ್ಬರು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos