ಫನಿ ಎಫೆಕ್ಟ್‌ ಗಗನಕ್ಕೇರಿದ ಮೀನಿನ ಬೆಲೆ

ಫನಿ ಎಫೆಕ್ಟ್‌ ಗಗನಕ್ಕೇರಿದ ಮೀನಿನ ಬೆಲೆ

ಕೋಲ್ಕತ್ತ, ಮೇ.6, ನ್ಯೂಸ್ ಎಕ್ಸ್ ಪ್ರೆಸ್:  ಫನಿ ಚಂಡಮಾರುತದ ಎಫೆಕ್ಟ್‌ ದೊಡ್ಡ ಮಟ್ಟದಲ್ಲಿ ಆಗಿದೆ. ಫನಿ ಚಂಡಮಾರುತದಿಂದ ದಿನಬಳಕೆಯ ವಸ್ತುಗಳ ದರ ಗಗನಕ್ಕೆ ಏರಿದೆ. ಅದರಲ್ಲಿಯೂ ಸ್ಥಳೀಯ ಜನರ ಜೀವನಾಡಿಯಾಗಿರುವ ಮೀನಿನ ಬೆಲೆ ಭಾರಿ ಪ್ರಮಾಣದಲ್ಲಿ ಏರಿರುವುದು ಸ್ಥಳೀಯರ ಚಿಂತೆಗೆ ಕಾರಣವಾಗಿದೆ. ಹೌದು, ಈ ಭಾಗದಲ್ಲಿ ಮೀನನ್ನು ಬಹುತೇಕರು ಬಳಸುತ್ತಾರೆ. ಆದರೆ ಚಂಡಮಾರುತದ ಎಫೆಕ್ಟ್‌ ನಿಂದ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿರುವುದರಿಂದ, ಮೀನಿನ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಪ್ರತಿನಿತ್ಯ ಮಾರುಕಟ್ಟೆಗೆ ಒರಿಸ್ಸಾದಿಂದ 40 ಟ್ರಕ್‌ ಹಾಗೂ ಆಂಧ್ರಪ್ರದೇಶದಿಂದ 50 ಟ್ರಕ್‌ ಮೀನು ಬರುತ್ತಿತ್ತು. ಆದರೆ ಚಂಡಮಾರುತದ ಎಫೆಕ್ಟ್‌ ನಿಂದ ಇದು ಭಾರಿ ಕುಸಿತವಾಗಿದೆ ಎಂದು ಹೇಳಲಾಗಿದೆ. ಆದ್ದರಿಂದ ಬಂಗಾಳದಲ್ಲಿ ಮೀನಿನ ದರ ಭಾರಿ ಏರಿಕೆಯಾಗಿದ್ದು, ಕೆಜಿಗೆ 400 ರೂ ಇದ್ದ ಪಭ ಎನ್ನುವ ಮೀನಿನ ದರ ಇದೀಗ 700 ರೂ. ಗೆ ಏರಿಕೆಯಾಗಿದೆ. ಕಾಟ್ಲಾ 350 ರಿಂದ 450, ರೊಹು 180 ರಿಂದ 270 ರೂ ಏರಿಕೆಯಾಗಿದೆ. ಆದರೆ ಮೀನಿಗೆ ಹೋಲಿಸಿದರೆ ತರಕಾರಿ ದರ ಹೆಚ್ಚಾಗಿಲ್ಲ ಎನ್ನುವುದು ಉತ್ತಮ ಸಂಗತಿ ಎಂದು ಸ್ಥಳೀಯರು ಹೇಳುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos