ಫಡ್ನವೀಸ್ ವಿರೋಧ ಪಕ್ಷದ ನಾಯಕ

ಫಡ್ನವೀಸ್ ವಿರೋಧ ಪಕ್ಷದ ನಾಯಕ

ಮುಂಬೈ, ಡಿ. 2 : ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸಲು ಭಾರೀ ಕಸರತ್ತು ನಡೆಸಿದ್ದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈಗ ವಿಧಾನಸಭೆಯ ವಿರೋಧ ಪಕ್ಷದ ನಾಯಕ. ಬಿಜೆಪಿ ಶಾಸಕಾಂಗ ಪಕ್ಷ ದೇವೇಂದ್ರ ಫಡ್ನವೀಸ್ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿದ ನಂತರ ನೂತನ ವಿಧಾನಸಭಾಧ್ಯಕ್ಷ ನಾನಾ ಪಟೋಲೆ ಇಂದು ಸದನದಲ್ಲಿಂದು ಫಡ್ನವೀಸ್ ಹೆಸರನ್ನು ವಿಪಕ್ಷ ನಾಯಕರೆಂದು ಅಧಿಕೃತವಾಗಿ ಘೋಷಿಸಿದ್ದರು.
ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಫಡ್ನವೀಸ್ ಅವರನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ನ ಸಚಿವರು ಮತ್ತು ಶಾಸಕರು ಅಭಿನಂದಿಸಿದರು. ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಸ್ಥಾನದಲ್ಲಿ ಆಸೀನರಾಗಿ ಪ್ರತಿಪಕ್ಷವಾಗಿ ಕಾಯ ನಿರ್ವಹಿಸಲಿದೆ.

ಫ್ರೆಶ್ ನ್ಯೂಸ್

Latest Posts

Featured Videos