ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಸೌಂದರ್ಯ ಕಾಪಾಡಲು ತುಂಬಾ ಕಷ್ಟಕರವಾಗಿದೆ ಇದರಿಂದ ನಾವು ಅನೇಕ ಕ್ರೀಮ್ಗಳನ್ನು ಬಳಸುತ್ತೀರಿ, ಆದರೆ ಇದರಿಂದ ನಮಗೆ ಅಪಾಯವೇ ಹೆಚ್ಚಾಗಿರುತ್ತದೆ ಅದರಿಂದ ನಾವು ದಿನ ನಿತ್ಯ ಮಾಡುವಂತಹ ಕ್ರಮಗಳಲ್ಲಿ ನಮ್ಮ ಸೌಂದರ್ಯವನ್ನು ಚೆನ್ನಾಗಿ ವೃತ್ತಿಸಿಕೊಳ್ಳಬಹುದಾಗಿದೆ
ಹೆಸರು ಕಾಳು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಷ್ಟೇ ಸೌಂದರ್ಯಕ್ಕೂ ಒಳ್ಳೆಯದು ಮೊಡವೆ ಕಲೆ, ಡ್ರೈ ಸ್ಕಿನ್ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.
ಹೆಸರುಕಾಳಿನಲ್ಲಿ ವಿಟಮಿನ್ ಹೇರಳವಾಗಿವೆ ಹಾಗಾಗಿ ಇದನ್ನು ಬಳಸುವುದರಿಂದ ಚರ್ಮ ನಳನಳಿಸುತ್ತದೆ. ಹೆಸರುಕಾಳಿನ ಫೇಸ್ ಪ್ಯಾಕ್ ಹಚ್ಚುವುದರಿಂದ ಡೆಡ್ ಸ್ಕಿನ್ ಅನ್ನು ನಿವಾರಿಸಿಕೊಳ್ಳಬಹುದು ಹಾಗೆ ಮುಖದಲ್ಲಿರುವ ಕಲೆಗಳು ಕೂಡ ಕಡಿಮೆಯಾಗುತ್ತದೆ.
ಒಂದು ಟೀ ಸ್ಪೂನ್ ಹೆಸರುಕಾಳಿನ ಇಟ್ಟು ಎರಡು ಚಮಚ ಅಲೋವೆರ ಜೆಲ್ 6 ಹನಿ ನಿಂಬೆರಸ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಹಾಗೆ ಬಿಡಿ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಒಂದು ಟೀ ಸ್ಪೂನ್ ಹೆಸರುಕಾಳಿನ ಪುಡಿ ಒಂದು ಟೀ ಸ್ಪೂನ್ ಜೇನುತುಪ್ಪ ಇವಿಷ್ಟನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಹಚ್ಚಿಕೊಂಡು ಹತ್ತು ನಿಮಿಷಗಳ ಬಿಟ್ಟು ಮುಖ ತೊಳೆದರೆ ನಿಮ್ಮ ಮುಖದಲ್ಲಿ ಮೊಡವೆಗಳ ಸಮಸ್ಯೆ ಗುಡ್ ಬೈ ಹೇಳಬಹುದು