ಇಂದು RCB vs LSG ಮುಖಾಮುಖಿ

ಇಂದು RCB vs LSG ಮುಖಾಮುಖಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಯಲ್ಲಿಂದು ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೇಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಆಡಿರುವ ಮೂರು ಪಂದ್ಯಗಳಿಂದ ಎರಡು ಅಂಕ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಲಕ್ನೋ ಎರಡು ಪಂದ್ಯದಿಂದ 2 ಅಂಕಗಳನ್ನು ಹೊಂದಿ ಆರನೇ ಸ್ಥಾನದಲ್ಲಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ಮೇಲೇಳಲು ಆರ್​ಸಿಬಿ ಈ ಪಂದ್ಯ ಗೆಲ್ಲಲೇ ಬೇಕಿದೆ.

ಸೋತ ಎಲ್ಲ ಪಂದ್ಯಗಳಲ್ಲಿ ಆರ್​ಸಿಬಿ ಸೋಲಿಗೆ ಬೌಲರ್​ಗಳು ಮುಖ್ಯಕಾರಣರಾದರು. ಇಂದು ಉಭಯ ತಂಡಗಳಿಗೆ ಗೆಲುವು ಮುಖ್ಯವಾಗಿರುವ ಕಾರಣ ಬೆಂಗಳೂರಿನಲ್ಲಿ ಹೈವೋಲ್ಟೇಜ್ ಮ್ಯಾಚ್ ಆಗುವುದು ಖಚಿತ.

ಕಳೆದ ಮೂರೂ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೀಮರ್ ಅಲ್ಜಾರಿ ಜೋಸೆಫ್ ದುಬಾರಿಯಾದರು. ಜೋಸೆಫ್‌ರ ನೀರಸ ಪ್ರದರ್ಶನದಿಂದ ಇವರು ಪ್ಲೇಯಿಂಗ್ XI ನಿಂದ ಔಟ್ ಆಗುವ ಸಾಧ್ಯತೆ ಇದೆ. ಇವರ ಸ್ಥಾನಕ್ಕೆ ಸ್ಟಾರ್ ವೇಗಿ ಲಾಕಿ ಫರ್ಗುಸನ್ ಬರುವುದು ಬಹುತೇಕ ಖಚಿತ. ಅವಕಾಶಕ್ಕಾಗಿ ಕಾಯುತ್ತಿರುವ ಇವರು ಇಂದು ಕಣಕ್ಕಿಳಿಯಬಹುದು.

ಹಾಗೆಯೆ ಆರ್​ಸಿಬಿ ತಂಡದ ಬ್ಯಾಟಿಂಗ್ ವಿಭಾಗದಲ್ಲೂ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ. ಕಳೆದ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದಲೂ ಕಳಪೆ ಫಾರ್ಮ್​ನಿಂದ ಕಂಗೆಟ್ಟಿರುವ ರಜತ್ ಪಾಟಿದರ್​ಗೆ ಇಂದು ಅವಕಾಶ ಸಿಗುವುದು ಅನುಮಾನ. ಇವರ ಜಾಗಕ್ಕೆ ಸುಯೇಶ್ ಪ್ರಭುದೇಸಾಯಿ ಅಥವಾ ಮಹಿಪಾಲ್ ಲುಮ್ರೂರ್ ಬರುವ ಸಾಧ್ಯತೆ ಇದೆ.

 

ಫ್ರೆಶ್ ನ್ಯೂಸ್

Latest Posts

Featured Videos