ಇಂದು ಪರೀಕ್ಷೆಗೆ ಹಾಜರಾದ ಸಚಿವ ಶಿವಳ್ಳಿ ಪುತ್ರಿ

ಇಂದು ಪರೀಕ್ಷೆಗೆ ಹಾಜರಾದ ಸಚಿವ ಶಿವಳ್ಳಿ ಪುತ್ರಿ

ಹುಬ್ಬಳ್ಳಿ, ಮಾ. 23, ನ್ಯೂಸ್ ಎಕ್ಸ್ ಪ್ರೆಸ್: ತಂದೆಯನ್ನ ಕಳೆದುಕೊಂಡ ನೋವಿನಲ್ಲಿಯೇ ಸಿ.ಎಸ್.ಶಿವಳ್ಳಿ ಅವರ ದ್ವಿತಿಯ ಪುತ್ರಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿದ್ದಾರೆ.  ಒಂದೆಡೆ ತಂದೆಯ ಸಾವಿನ ದುಃಖ ಮತ್ತೊಂದೆಡೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಾದ ಅನಿವಾರ್ಯತೆ.

ತಂದೆ ಶಿವಳ್ಳಿ ಸಾವಿನ ದುಃಖದ ನಡುವೆಯೂ ಅವರ 2ನೇ ಮಗಳು ಕಣ್ಣೀರು ಹಾಕುತ್ತಲೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದುದು ಎಂತಹವರ ಹೃದಯವನ್ನೂ ಕಲಕುವಂತಿತ್ತು.

ಇಂದು ಸಂಜೆ ತಮ್ಮ ತಂದೆಯ ಅಂತ್ಯಕ್ರಿಯೆ ಜರುಗಲಿದೆ. ನಿನ್ನೆಯಷ್ಟೇ ತಂದೆಯ ಸಾವಿನ ಆಘಾತದಿಂದ ಹೊರಬರಲಾರದೆ ಮಗಳು ರೂಪಾ ಶಾಕ್ಗೆ ಒಳಗಾಗಿದ್ದರು. ಈ ನಡುವೆಯೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಅನಿವಾರ್ಯತೆ ಎದುರಾಗಿದೆ. ಆದರೂ ಧೃತಿಗೆಡದೆ ಅಪ್ಪನ ನೆನೆಯುತ್ತಲೇ ಹುಬ್ಬಳ್ಳಿಯ ಸೆಂಟ್ ಆಂಟೋನಿ ಶಾಲೆಯಲ್ಲಿ ಪರೀಕ್ಷೆ ಬರೆದರು.

ಫ್ರೆಶ್ ನ್ಯೂಸ್

Latest Posts

Featured Videos