ಇವಿಎಂ ‘ಸಾಗಾಟ’ದ ವೀಡಿಯೋ ಬಹಿರಂಗ..!

ಇವಿಎಂ ‘ಸಾಗಾಟ’ದ ವೀಡಿಯೋ ಬಹಿರಂಗ..!

ಉತ್ತರ ಪ್ರದೇಶ, ಮೇ.22, ನ್ಯೂಸ್‍ ಎಕ್ಸ್ ಪ್ರೆಸ್‍:  ಲೋಕಸಭಾ ಚುನಾವಣೆ ಮತಎಣಿಕೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಇದರ ಮಧ್ಯೆ ಮತಯಂತ್ರಗಳನ್ನು ತಿರುಚಲಾಗ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಉತ್ತರ ಪ್ರದೇಶದ ಪೂರ್ವಭಾಗದ ವಾರಾಣಸಿ, ಚೌಂದಲಿ,ಮಿರ್ಜಾಪುರ, ಗಾಜಿಪುರ ಜಿಲ್ಲೆಗಳಿಂದ ಸೋಮವಾರ ರಾತ್ರಿ ಮತಯಂತ್ರಗಳನ್ನು ವಾಹನಗಳನ್ನು ತುಂಬಿಕೊಂಡು ಹೋಗುತ್ತಿರೋ ವೀಡಿಯೋ ವೈರಲ್ ಆಗಿದೆ. ಬಿಹಾರ, ಪಂಜಾಬ್‍ನಿಂದಲೂ ಇದೇ ತರಹದ ಆರೋಪಗಳು ಕೇಳಿ ಬಂದಿವೆ.

ವಿಷಯ ತಿಳಿದ ಎಸ್‍ಪಿ ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಇವಿಎಂ ರಾತ್ರೋರಾತ್ರಿ ಹೊರಗೆ ಸಾಗಿಸಲಾಗ್ತಿದೆ ಎಂದು ಆರೋಪಿಸಿ ಇವಿಎಂ ಸಂಗ್ರಹಿಸಿಟ್ಟಿರೋ ಕಟ್ಟಡದ ಮುಂದೆ ಧರಣಿ ಆರಂಭಿಸಿದ್ದಾರೆ. ಮತೆಣಿಕೆ ಮುಗಿಯುವರೆಗೂ ಇಲ್ಲೇ ಕುಳಿತುಕೊಳ್ಳೋದಾಗಿ ಕಾರ್ಯಕರ್ತರು ಘೋಷಿಸಿದ್ದಾರೆ.

ಆರೋಪ ತಳ್ಳಿ ಹಾಕಿದ ಆಯೋಗ

ಮತಯಂತ್ರಗಳ ಸಾಗಾಟದ ಬಗ್ಗೆ ಪ್ರತಿಪಕ್ಷಗಳು ಮಾಡುತ್ತಿರೋ ಸತ್ಯವಲ್ಲ ಎಂದು ತಳ್ಳಿಹಾಕಿದೆ.

ಮಾಜಿ ರಾಷ್ಟ್ರಪತಿ ಕಳವಳ

ಮತಯಂತ್ರ ತಿರುಚುವ ವಿಚಾರಕ್ಕೆ ಸಂಬಂಧಿಸಿದಂತೆ ಬರುತ್ತಿರೋ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆಮಾಡಿರೋ ಪ್ರಣವ್ ಮುಖರ್ಜಿ, ಪ್ರಜಾಪ್ರಭುತ್ವದ ಮೂಲಕ್ಕೆ ಸವಾಲು ಒಡ್ಡುವ ಯಾವ ಊಹಾಪೋಹಗಳಿಗೆ ಅವಕಾಶ ನೀಡಬಾರದು. ಜನರ ತೀರ್ಪು ಪವಿತ್ರವಾದದ್ದು. ಅಲ್ಲಿ ಒಂದಿಷ್ಟೂ ಸಂದೇಹಕ್ಕೂ ಅವಕಾಶ ಇರಕೂಡದು. ಈ ಕುರಿತ ಊಹಾಪೋಹಗಳಿಗೆ ತಕ್ಷಣ ತೆರೆಎಳೆಯುವಂತೆ ಚುನಾವಣಾ ಆಯೋಗಕ್ಕೆ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos