ಇವಿಎಂ ಯಂತ್ರಗಳ ಸಾಚಾತನ: 120 ದೇಶಗಳಲ್ಲಿದ ಯಂತ್ರ ಭಾರತದಲ್ಲೇಕೆ!?

ಇವಿಎಂ ಯಂತ್ರಗಳ ಸಾಚಾತನ: 120 ದೇಶಗಳಲ್ಲಿದ ಯಂತ್ರ ಭಾರತದಲ್ಲೇಕೆ!?

ನವದೆಹಲಿ, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಮತ್ತೆ ಮುನ್ನೆಲೆಗೆ ಬಂದ ಇವಿಎಂ ಯಂತ್ರಗಳ ಸಾಚಾತನದ ಪ್ರಶ್ನೆ; 120 ದೇಶಗಳಲ್ಲಿ ಬ್ಯಾನ್ ಮಾಡಲಾದ ಯಂತ್ರಕ್ಕೆ ಭಾರತದಲ್ಲೇಕೆ ಮನ್ನಣೆ? ಈ ಯಂತ್ರಗಳು ಸಂವಿಧಾನಕ್ಕೆ ವಿರುದ್ಧವಾದದ್ದು ಎಂಬ ಕಾರಣಕ್ಕೆ ಜರ್ಮನಿ ದೇಶವೂ ಈ ಯಂತ್ರವನ್ನು ಕಸದಬುಟ್ಟಿಗೆ ಎಸೆದಿದೆ. ಇನ್ನೂ ಇಟಲಿ, ವೆನಿಜುವೆಲಾ, ಉಕ್ರೇನ್, ಇಂಗ್ಲೆಂಡ್, ಪ್ರಾನ್ಸ್ ಹಾಗೂ ಅಮೇರಿಕಾ ದಂತಹ ತಾಂತ್ರಿಕ ದಿಗ್ಗಜ ದೇಶಗಳು ಸೇರಿದಂತೆ ವಿಶ್ವದ ಒಟ್ಟು 120 ದೇಶಗಳು ಈ ಯಂತ್ರ ನಂಬಿಕಾರ್ಹವಲ್ಲ ಎಂಬ ಕಾರಣಕ್ಕೆ ಮತ್ತೆ ಬ್ಯಾಲೆಟಿನ್ ಚುನಾವಣೆ​ಗೆ ಮೊರೆಹೋಗಿವೆ. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಸಾಚಾತನ ಮತ್ತು ತಾಂತ್ರಿಕ ದೋಷದ ಕುರಿತ ರಾಜಕೀಯ ಚರ್ಚೆಗಳು ಮತ್ತೊಮ್ಮೆ ಗರಿಗೆದರಿವೆ. ಮೊದಲ ಹಂತದ ಚುನಾವಣೆಯಲ್ಲಿ 16 ರಾಜ್ಯಗಳು 2 ಕೇಂದ್ರಾಡಳಿತ ಪ್ರದೇಶ ಸೇರಿದಂತೆ ದೇಶದ ಒಟ್ಟು 91 ಲೋಕಸಭಾ ಕ್ಷೇತ್ರ ಹಾಗೂ ಆಂಧ್ರಪ್ರದೇಶ, ಒಡಿಶಾ, ಅರುಣಾಚಲಪ್ರದೇಶ, ಸಿಕ್ಕಿಂ ರಾಜ್ಯಗಳ 296 ವಿಧಾನಸಭಾ ಕ್ಷೇತ್ರಗಳಿಗೆ ಏ.11 ರಂದು ಮತದಾನ ನಡೆದಿತ್ತು. ಈ ಪೈಕಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಜಮ್ಮ-ಕಾಶ್ಮೀರದಲ್ಲಿ ಇವಿಎಂ ಯಂತ್ರ ಕೈಕೊಟ್ಟಿದೆ. ಅಂಧ್ರಪ್ರದೇಶ ಒಂದರಲ್ಲೆ ಸುಮಾರು 350ಕ್ಕೂ ಹೆಚ್ಚು ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಾಂತ್ರಿಕ ದೋಷದಿಂದ 150 ಮತಗಟ್ಟೆಗಳಲ್ಲಿ ಮತದಾನ ಅರ್ಧಕ್ಕೆ ಸ್ತಬ್ಧವಾಗಿದೆ. ಪರಿಣಾಮ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವಂತೆ ಚುನಾವಣಾ ಆಯೋಗವವನ್ನು ಆಗ್ರಹಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos