ಚಳಿಗಾಲದಲ್ಲೂ ಮಳೆ..!

ಚಳಿಗಾಲದಲ್ಲೂ ಮಳೆ..!

ಬೆಂಗಳೂರು, ಡಿ. 2 : ಮಳೆಗಾಲ ಮುಗಿದು ಚಳಿಗಾಲದ ಶುರುವಾಗಿದೆ.ಚಳಿಗಾಲದ ಅನುಭವ ಕಾಣಬೇಕಿದ ಸಿಲಿಕಾನ್ ಜನರಿಗೆ ಎರಡು ದಿನ ಅನಿರೀಕ್ಷಿತ ಮಳೆ ಅಚ್ಚರಿ ಮೂಡಿಸಿದೆ. ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ, ಮೋಡ ಮುಚ್ಚಿದ ವಾತಾವರಣ ಕಂಡು ಬರುತ್ತಿದೆ. ವಾತಾವರಣ ಬದಲಾಗುತ್ತಿರುವ ಪ್ರಶ್ನೆಗಳಿಗೆಲ್ಲ ವಿಜ್ಞಾನಿಗಳು ಬೆಚ್ಚಿಬೀಳುವ ಕಾರಣ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ ಆಗುತ್ತಿದ್ದು, ಸೂರ್ಯ ಮರೆಯಾಗುತ್ತಿದ್ದಾನೆ. ಹವಾಮಾನ ವೈಪರೀತ್ಯದ ಹಿಂದೆ ಅರಬ್ಬೀ, ಬಂಗಾಳಕೊಲ್ಲಿಯ ಸಮುದ್ರಾಳದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಭೂಕಂಪ ಸೃಷ್ಟಿಯಾಗುತ್ತಿದ್ದು, ಇದು ಪ್ರಾಕೃತಿಕ ಬದಲಾವಣೆಗೂ ಕಾರಣವಾಗಿದೆ. ಹಾಗಾಗಿಯೇ ಇದು ತುಂಬಾ ಡೇಂಜರಸ್ ಎಂದು ಭೂಗರ್ಭ ತಜ್ಞರು ಹೇಳುತ್ತಾರೆ.
ಬೆಂಗಳೂರಿಗೆ ಇನ್ನಷ್ಟು ಅಪಾಯ ಕಾಡುವ ಸಾಧ್ಯತೆಗಳಿವೆ. ಮಳೆಯ ಅಬ್ಬರ, ವಾತಾವರಣ ಏರುಪೇರಿನಿಂದ ಅನಾರೋಗ್ಯದಂತಹ ಸಮಸ್ಯೆ ಕಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos