‘ಎತ್ತಿನಹೊಳೆ’ ಯೋಜನೆಗೆ ‘ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ’ ಗ್ರೀನ್ ಸಿಗ್ನಲ್..!

‘ಎತ್ತಿನಹೊಳೆ’ ಯೋಜನೆಗೆ ‘ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ’ ಗ್ರೀನ್ ಸಿಗ್ನಲ್..!

ಮಂಗಳೂರು, ಮೇ. 25, ನ್ಯೂಸ್‍ ಎಕ್ಸ್ ಪ್ರೆಸ್‍: ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ  ಹಸಿರು ನ್ಯಾಯಾಧಿಕರಣ ( ಎನ್‍ ಜಿಟಿ ) ಗ್ರೀನ್ ಸಿಗ್ನಲ್ ನೀಡಿದೆ. ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳಿಗೆ ನೀರಿನ ಸೌಕರ್ಯ ಕಲ್ಪಿಸುವ ಮಹತ್ವದ ಎತ್ತಿನಹೊಳೆ  ಕುಡಿಯುವ ನೀರಿನ ಯೋಜನೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಷರತ್ತುಬದ್ದ ಅನುಮೋದನೆ ನೀಡಿದೆ. ಯೋಜನೆಯನ್ನು ಕುಡಿಯುವ ನೀರಿಗಾಗಿ ನಿರ್ಮಿಸುವುದಾದರೆ ಅದಕ್ಕೆ ಪರಿಸರ ನ್ಯಾಯಾಲಯದ ಅನುಮತಿಯ ಅಗತ್ಯವಿಲ್ಲ ಎಂದಿದೆ. ಪರಿಸರವಾದಿಗಳು ಯೋಜನೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲು ಸ್ವತಂತ್ರರು

ಟ್ರಿಬ್ಯೂನಲ್ ಯೋಜನೆಯ ಮೇಲ್ವಿಚಾರಣೆಗಾಗಿ ಅರಣ್ಯ ಇಲಾಖೆ ಮತ್ತು ಎಂಒಇಎಫ್ ಗೆ  ನಿರ್ದೇಶನ ನೀಡಿದ್ದು ಇಲಾಖೆಗಳು ಯೋಜನೆಯಲ್ಲಿ ಯಾವುದೇ ನಿಯಮ ಉಲ್ಲಂಘನೆಯನ್ನು ಕಂಡುಕೊಂಡಲ್ಲಿ ಅಂತಹಾ ವೇಳೆ ಸೂಕ್ತ ಕ್ರಮ ತೆಗೆದುಕೊಳ್ಳಲು ಅವರು ಸ್ವತಂತ್ರರಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಯೋಜನೆಯನ್ನು ಪ್ರಗತಿಯಲ್ಲಿರುವಾಗ ಯಾವುದೇ ಹೆಚ್ಚಿನ ಅದ್ಯಯನ ನಡೆಯಬೇಕು,  ಪಶ್ಚಿಮ ಘಟ್ಟಗಳ ಮೇಲೆ ಅದರ ಪ್ರಭಾವದ ಹಿನ್ನೆಲೆಯಲ್ಲಿ ಪರಿಸರದ ರಕ್ಷಣೆಗೆ ಸಂಬಂಧಿಸಿ ಸೂಕ್ತ ರೀತಿಯ ಅನುಷ್ಟಾನ ಮಾಡಲು ಅವರು ಸ್ವತಂತ್ರರಿದ್ದಾರೆ.

ಪರಿಸರವಾದಿಗಳಿಗೆ ಹಿನ್ನಡೆ

ಹಸಿರು ನ್ಯಾಯಪೀಠ ಈ ತೀರ್ಪು ನೀಡಿದ್ದು ಯೋಜನೆಯಿಂದಾಗಿ ಪಶ್ಚಿಮ ಘಟ್ಟಗಳಿಗೆ ಹಾನಿ ಉಂಟಾಗಲಿದೆ ಎಂದು ವಾದಿಸಿದ್ದ ಪರಿಸರವಾದಿಗಳಿಗೆ ಇದರಿಂದ ಭಾರೀ ಹಿನ್ನೆಡೆಯಾಗಿದೆ. ಎತ್ತಿನಹೊಳೆ ಯೋಜನೆ ವಿರೋಧಿಸಿ ಎನ್‍ ಜಿಟಿಗೆ ಹಲವರು ಅರ್ಜಿ ಸಲ್ಲಿಸಿದ್ರು. ಪರಿಸರವಾದಿಗಳು ಪರಿಸರಕ್ಕೆ ಹಾನಿಯಾಗಲಿದೆ ವಾದಿಸಿದ್ರು. ನೈಜ ಕಾರಣದಲ್ಲಿ ಇದು ಕುಡಿಯುವ ನೀರಿನ ಯೋಜನೆಯಲ್ಲ ಎಂದು ಪ್ರತಿಪಾದಿಸಿದ್ರು.

ಎತ್ತಿನಹೊಳೆ ಯೋಜನೆಗೆ ತೀವ್ರ ವಿರೋಧ

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಎತ್ತಿನ ಹೊಳೆ ಪರ ಆದೇಶ ನೀಡಿರೋದಕ್ಕೆ ದಕ್ಷಿಣ ಕನ್ನದ ಜನರು ಆಕ್ರೋಶ ಹೊರಹಾಕ್ತಿದ್ದಾರೆ. ಇತ್ತೀಚೆಗೆ ನೇತ್ರಾವತಿ ನದಿ ಬತ್ತಿಹೋಗಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಕ್ತರು ಮಳೆ ಬರುವವರೆಗೂ ಬರದಂತೆ ಮನವಿ ಮಾಡಿದ್ರು. ಮಂಗಳೂರಿನ ಜನರು ಕುಡಿಯೋಕೂ ನೀರಿಲ್ಲದೇ ಪರದಾಡುವ ಸ್ಥಿತಿಯಲ್ಲಿದ್ದಾರೆ. ಇಲ್ಲಿಗೆ ನೀರಿಲ್ಲ. ನಾವ್ಯಾಕೆ ಬೇರೆ ಜಿಲ್ಲೆಗಳಿಗೆ ನೀರು ಕೊಡಬೇಕು ಎಂದು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.

 

 

 

 

 

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos