ಎತ್ತಿನ ಬಂಡಿಯೇ ಈಗ ಗ್ರಂಥಾಲಯ

ಎತ್ತಿನ ಬಂಡಿಯೇ ಈಗ ಗ್ರಂಥಾಲಯ

ಪುಣೆ , ಆ. 23 : ಚಿಣ್ಣರಿಗಾಗಿಯೇ ಮಕ್ಕಳಗಾಗಿ ಮಹಾರಾಷ್ಟ್ರದ ಸೋಲಾಪುರದ ದರ್ಗನಹಳ್ಳಿ ಗ್ರಾಮದ ಎತ್ತಿನಬಂಡಿ ಗ್ರಂಥಾಲಯ ಈಗ ಸಖತ್ ಸುದ್ದಿಯಲ್ಲಿದೆ. ಎತ್ತಿನಬಂಡಿಯಲ್ಲಿಯೇ ಪುಸ್ತಕಗಳನ್ನು ಇರಿಸಲಾಗಿದ್ದು, ಇದು ಹಳ್ಳಿ ಮಕ್ಕಳ ಅಚ್ಚುಮೆಚ್ಚಿನ ಎತ್ತಿನಬಂಡಿ ಗ್ರಂಥಾಲಯ ಎಂದೇ ಮೆಚ್ಚುಗೆ ಪಡೆದಿದೆ. ಇತ್ತೀಚೆಗೆ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಕಳೆದ 6 ತಿಂಗಳಿಂದ ಎತ್ತಿನಬಂಡಿ ಗ್ರಂಥಾಲಯವನ್ನು ಗ್ರಾಮಕ್ಕೆ ತರುತ್ತಿರುವ ಕಾಶಿನಾಥ್ ಕೋಲಿ ಅವರ ಶ್ರಮ.
ಕಾಶಿನಾಥ್ ಕೋಲಿ ಅವರು ಅಪರೂಪದ ಎತ್ತಿನಬಂಡಿ ಗ್ರಂಥಾಲಯ ನಡೆಸುತ್ತಿದ್ದಾರೆ. ವಿಶೇಷವಾಗಿ ಹಳ್ಳಿಯ ಮಕ್ಕಳಿಗಾಗಿಯೇ ಗ್ರಂಥಾಲಯ.ಆರು ತಿಂಗಳಿನಿಂದ ಈ ಗ್ರಂಥಾಲಯ ಕಾರ್ಯನಿರ್ವಸುತ್ತಿದೆ. ಹೀಗಾಗಿ ಹಳ್ಳಿಯ ಮಕ್ಕಳು ಈಗ ಮನೆಯಲ್ಲಿಯೇ ಕುಳಿತು ಪುಸ್ತಕಗಳನ್ನು ಉಚಿತವಾಗಿ ಓದುತ್ತಿದ್ದಾರೆ. ಮಕ್ಕಳ ಅನುಕೂಲಕ್ಕಾಗಿ ಕಾಶಿನಾಥ್ ಅವರು ಸುಮಾರು ಒಂದೂವರೆ ಸಾವಿರ ಪುಸ್ತಕಗಳನ್ನು ತಮ್ಮ ಎತ್ತಿನಬಂಡಿ ಗ್ರಂಥಾಲಯದಲ್ಲಿ ಸಂಗ್ರಹಿಸಿಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos