ರಾಜ್ಯದಲ್ಲಿ ಎರಡು ದಿನ ಎಸ್ಕಾಂ ಆನ್​ಲೈನ್ ಸೇವೆ ಸ್ಥಗಿತ!

ರಾಜ್ಯದಲ್ಲಿ ಎರಡು ದಿನ ಎಸ್ಕಾಂ ಆನ್​ಲೈನ್ ಸೇವೆ ಸ್ಥಗಿತ!

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಂದ ನಂತರ ಉಚಿತ ವಿದ್ಯುತ್ ಯೋಜನೆ ಜಾರಿಗೊಳಿಸಿದೆ. ಇದರಿಂದ ಹೆಚ್ಚು ವಿದ್ಯುತ್‌ ಬಳಕೆಯಾಗುತ್ತಿತ್ತು. ಆದರೆ ಸರ್ಕಾರ  ವಿದ್ಯುತ್‌ ದರ ಹೆಚ್ಚಳದಿಂದ ಸಾಮಾನ್ಯ ಜನರಿಗೆ ಅತಂಕವಾಗಿದೆ. ಬಿಲ್ ದರ ಹೆಚ್ಚಳವಾಗಿದ್ದಲ್ಲದೆ, ಲೋಡ್ ಶೆಡ್ಡಿಂಗ್ ಸಮಸ್ಯೆ ಉಂಟಾಗಿದೆ. ರಾಜ್ಯದಾದ್ಯಂತ ಪವರ್ ಕಟ್​ನಿಂದ ಜನರು ಆಕ್ರೋಶಗೊಂಡಿದ್ದಾರೆ. ಈ ನಡುವೆ, ರಾಜ್ಯದ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ನವೆಂಬರ್ 24 ಮತ್ತು ನವೆಂಬರ್ 26 ರಂದು ಎಸ್ಕಾಂ ಆನ್​ಲೈನ್ ಸೇವೆ ಗ್ರಾಹಕರಿಗೆ ಲಭ್ಯವಿರುವುದಿಲ್ಲ.

ರಾಜ್ಯದ ಐದೂ ಎಸ್ಕಾಂಗಳ ವ್ಯಾಪ್ತಿಯಲ್ಲಿ ವೆಬ್ ಪೋಟರ್ಲ್​​ಗೆ ಸಂಬಂಧಿಸಿದಂತೆ ತುರ್ತು ತಾಂತ್ರಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆ ಈ ಎರಡು ದಿನದಂದು ಎಸ್ಕಾಂ ಆನ್​ಲೈನ್ ಸೇವೆ ಸ್ಥಗಿತಗೊಳಿಸಲಾಗಿದೆ.

ನ.24 ರಂದು ಮಧ್ಯಾಹ್ನ 12 ಗಂಟೆಯಿಂದ ನ.26 ರಂದು ಬೆಳಗ್ಗೆ 11.59 ಗಂಟೆವರೆಗೆ ಎಲ್ಲಾ ರೀತಿಯ ಆನ್ ಲೈನ್ ಸೇವೆ ಸ್ಥಗಿತಗೊಳ್ಳಲಿದೆ. ಈ ಬಗ್ಗೆ ಬೆಸ್ಕಾಂ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಕೋರಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos