ಸಂಗೀತ ಸಮಾಜದಲ್ಲಿ ಸಮಾನತೆ ಸಾರುತ್ತದೆ

ಸಂಗೀತ ಸಮಾಜದಲ್ಲಿ ಸಮಾನತೆ ಸಾರುತ್ತದೆ

ಚಾಮರಾಜನಗರ: ಸಂಗೀತ ಶಾಲೆಗೆ ಹೊದವರಲ್ಲ ಅವರು ಅದರು ೪೦೦೦೦ ಹಾಡುಗಳನ್ನು ಹಾಡಿದ್ದಾರೆ. ಮೊದಲ ಗಾಯನವನ್ನು ತೆಲುಗು ಭಾಷೆಯಲ್ಲಿ ಪ್ರಾರಾಂಬಿಸಿ ಎರಡನೇೆ ಹಾಡು ಕನ್ನಡ ಚಿತ್ರದಲ್ಲಿ ಹಾಡಿದ್ದಾರೆ ಅಂದು ಹಾಡಿನ ಪಯಣ ಬೆಳಸಿದ ಅವರು ಇಂದಿರುಗಲೇಇಲ್ಲ ಎಂದು ಐ.ಎಸ್.ಎಫ್ ನಿವೃತ್ತ ನಿದೇರ್ಶಕ ಕೆ.ಆರ್.ಐ.ಡಿ.ಎಲ್ ಡಾ.ಆರ್.ರಾಜು ತಿಳಿಸಿದರು.
ಆಯುಷ್ ಟಿವಿ ಬೆಂಗಳೂರು, ಶ್ರೀ ಬಿ.ಪುಟ್ಟಸ್ವಾಮಿ ಅಭಿಮಾನಿಗಳ ಬಳಗ, ಕರ್ನಾಟಕ ಜಾನಪದ ಪರಿಷತ್ತು, ಚೇತನ ಕಲಾವಾಹಿನಿ ಚಾಮರಾಜನಗರ ಇವರ ಸಹಯೋಗದಲ್ಲಿ ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಶೃತಿ ಗಂಧರ್ವ, ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಗಾನಾಭಿಷೇಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿಗಳಾದ ಮಂಜು ಕೋಡಿಉಗನೆ ಮಾತನಾಡಿ ಸಂಗೀತಕ್ಕೆ ಬಹಳ ಮಹಾತ್ವವಿದೆ. ಸಂಗೀತ ನೋವುಗಳನ್ನು ದೂರಮಾಡುತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಗಾಯನದ ಕಡೆಗೆ ಮೊರೆ ಹೋಗಿದ್ದಾರೆ. ಎಸ್.ಪಿ.ಪಿ ಅವರು ಗಾಯನದಲ್ಲಿ ಮಾಡಿರುವ ಸೇವೆ ಅನನ್ಯವಾದದು. ಕನ್ನಡ ಚಿತ್ರಗಳಿಗೆ ೧೫ ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಹಾಡಿನ ನೆನಪು ಸಾವಿರ ವರ್ಷಗಳಾದರು ಮರೆಯಲಾಗದು. ಅವರು ಕಂಠಗಾಯನದಲ್ಲಿ ಇನ್ನು ನಮ್ಮ ಮುಂದೆ ಇದ್ದಾರೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos