ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ: ವಿಎಸ್ ಎಸ್ ಎನ್ ಅಧ್ಯಕ್ಷ ಶ್ರೀನಿವಾಸ್

ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ: ವಿಎಸ್ ಎಸ್ ಎನ್ ಅಧ್ಯಕ್ಷ ಶ್ರೀನಿವಾಸ್

ದೇವನಹಳ್ಳಿ, ಸೆ. 13: ಅಭಿವೃದ್ಧಿಯ ಹೆಸರಿನಲ್ಲಿ ಮರ ಗಿಡಗಳನ್ನು ಕಡಿಯುತ್ತಿದ್ದೇವೆ. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ ಆಗಿದೆ ಎಂದು ವಿಎಸ್ ಎಸ್ ಎನ್ ಅಧ್ಯಕ್ಷ ನೆರಗನ ಹಳ್ಳಿ ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘ ವತಿಯಿಂದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಡುವುದರ ಮೂಲಕಚಾಲನೆ ನೀಡಿ ಮಾತನಾಡಿದರು.

ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ಕೈಲಾದ ಕೊಡುಗೆ ನೀಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು. ಗಿಡ ಮರಗಳು ಹಾಳಾಗುತ್ತಿರುವುದರಿಂದ ಪ್ರಕೃತಿ ವಿಕೋಪ, ಬರಗಾಲ , ಅಂರ್ತಜಲ ಮಟ್ಟ ಕುಸಿತ ಸೇರಿದಂತೆ ಮತ್ತಿತರ ಸಮಸ್ಯೆಗಳು ತಲೆ ದೂರಿದೆ. ಇವುಗಳಿಗೆ ಪರಿಹಾರದ ರೂಪವಾಗಿ ಪ್ರತಿಯೊಬ್ಬರೂ ಕನಿಷ್ಠ 2 ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಜವಾಬ್ದಾರಿ ಹೊರಬೇಕು. ತೀವ್ರ ಬರಗಾಲಕ್ಕೆ ತುತ್ತಾಗಿರುವುದರಿಂದ ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆ ಕೈಗೊಳ್ಳದಿದ್ದರು ಭವಿಷ್ಯದ ದಿನಗಳಲ್ಲಿ ಇರುವ ಜಲ ಮೂಲಗಳು ಬರಿದಾಗಲಿದೆ. ಅದಕ್ಕಾಗಿ ಗಿಡ ಮರಗಳು ನೆಡಬೇಕು ಹಾಗೂ ಅವುಗಳನ್ನು ಸಂರಕ್ಷಣೆ ಮಾಡಬೇಕು ಎಂದು ಹೆಳಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎನ್ ಸೊಣ್ಣಪ್ಪ ಮಾತನಾಡಿ ಪರಿಸರ ಅಸಮತೋಲನ ದಿಂದಾಗಿ ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿರುವ ಮುನ್ನ ಜಾಗೃತರಾಗಿ ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸಿ ಸಂಕ್ಷಣೆ ಮಾಡಬೇಕು.ಪರಿಸರ ಮಾಲಿನ್ಯದಿಂದ ಮನುಷ್ಯನು ನಾನಾ ಖಾಯಿಲೆಗಳಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಪರಿಸರ ನಾಶದಿಂದ ಸಮಯಕ್ಕೆ ಸರಿಯಾಗಿ ಮಳೆ ಬೆಳೆ ಇಲ್ಲದೆ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ ಸ್ವಾರ್ಥಕ್ಕೆ ಮರಗಳ್ನು ಕಡೆದು ಉತ್ತಮ ವಾತಾವರಣವನ್ನು ಕಳೆದು ಕೊಳ್ಳುತ್ತಿದ್ದೇವೆ ಎಂದರು.

ಎಪಿ ಎಮ್ ಸಿ ಅಧ್ಯಕ್ಷ ಕೆ.ವಿ ಮಂಜುನಾಥ್ ಮಾತನಾಡಿ ಮರ ಗಿಡಗಳ ಹಸಿರು ಜೀವ ಸಂಕುಲದ ಉಸಿರನ್ನು ಉಳಿಸುವುದು. ಪರಿಸರವು ಎಲ್ಲರ ಅತ್ಯಮೂಲ್ಯ ಪರಂಪರೆ ಆಗಿದೆ. ಜಾಗತೀಕ ತಾಪಾಮಾನದಲ್ಲಿ ಬಹಳಷ್ಟು ಬದಲಾವಣೆ ಆಗಿದ್ದು ಅದನ್ನು ಸಮತೋಲನದಲ್ಲಿ ಇಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಎಲ್ಲರೂ ಪರಿಸರವನ್ನು ಉಳಿಸಿ ಬೆಳಸುವುದಕ್ಕೆ ಮುಂದಾಗಬೇಕು. ಹಸಿರೇ ಉಸಿರು, ಕಾಡು ಬೆಳೆಸಿ ನಾಡು ಉಳಿಸಿ, ಮನೆ ಗೊಂದು ಮರ ಊರಿಗೋಂದು ವನ ಎಂಬ ಘೋಷ ವಾಕ್ಯ ವನ್ನು ಪರಿಪಾಲಿಸಬೇಕು ಎಂದು ಕರೆ ನೀಡಿದರು.

ಈ ವೇಳೆಯಲ್ಲಿ ಇದೇ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಸದಸ್ಯರಾದ ಮಂಜುನಾಥ್, ಕಾಮೇನಹಳ್ಳಿ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಚೆನ್ನಕೃಷ್ಣಪ್ಪ, ದುದ್ದನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಮುನಿರಾಜು, ವಿಎಸ್‌ಎಸ್‌ಎನ್ ಉಪಾಧ್ಯಕ್ಷ ಪಟಾಲಪ್ಪ, ನಿರ್ದೇಶಕರಾದ ವಿ.ಮುನಿರಾಜು, ಎನ್.ಮಂಜುನಾಥ್, ಆರ್.ಕೆ.ರಾಮೇಗೌಡ, ಮಎನ್.ಚಿಕ್ಕಾಂಜೀನಪ್ಪ, ಅನ್ನಪೂರ್ಣಮ್ಮ, ವೆಂಕಟಾಚಲ, ಮಂಗಳಮ್ಮ, ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಕೆ.ರಮೇಶ್, ಸಿಬ್ಬಂದಿವರ್ಗ, ಗ್ರಾಮಸ್ಥರು, ಮತ್ತಿತರರು ಇದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos