ಪರಿಸರ ಸ್ವಚ್ಚತೆಯಲ್ಲಿ ತೊಡಗಿರುವ ಪರಿಸರ ಪ್ರೇಮಿ

ಪರಿಸರ ಸ್ವಚ್ಚತೆಯಲ್ಲಿ ತೊಡಗಿರುವ ಪರಿಸರ ಪ್ರೇಮಿ

ಬರಗೂರು: ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನದಂತೆ ಕಾಯಕವನ್ನೇ ಕೈಲಾಸ ಎಂದು ನಂಬಿರುವ ಇಲ್ಲೋರ್ವ ಪರಿಸರ ಪ್ರೇಮಿ ಬೆಸ್ಕಾಂ ನೌಕರ ತನ್ನ ನೌಕರಿಯ ರಜೆ ಹಾಗೂ ಬಿಡುವಿನ ಸಮಯದಲ್ಲಿ ಪರಿಸರ ಸಂರಕ್ಷಣೆ ಹಾಗೂ ಬಸ್ ನಿಲ್ದಾಣದ ತಂಗುದಾಣಗಳನ್ನು ಶುಚಿ ಮಾಡುವ ಕಾಯಕ ರೂಢಿಸಿಕೊಂಡಿದ್ದಾರೆ.
ಸುಮಾರು ವರ್ಷಗಳಿಂದ ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಬರಗೂರು ಗ್ರಾಮದ ಬೆಸ್ಕಾಂನಲ್ಲಿ ನೌಕರನಾಗಿರುವ ಎಲ್.ಮಂಜುನಾಥ್ ನೌಕರಿಯ ಜೊತೆ ಬಿಡುವಿನ, ಹಾಗೂ ರಜಾ ಸಮಯದಲ್ಲಿ ಕಳೆದ ೬-೭ ವರ್ಷಗಳಿಂದ ಪರಿಸರ ಕಾಳಜಿಯ ಜೊತೆ ಬಸ್ ನಿಲ್ದಾಣದ ತಂಗುದಾಣ ಸೇರಿದಂತೆ ರಸ್ತೆಯಲ್ಲಿ ಬಿದ್ದಿರುವ ಕಸಕಡ್ಡಿಯನ್ನು ಶುಚಿ ಮಾಡುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ.
ಪ್ರಾಣಿ ಪಕ್ಷಿಗಳಿಗೆ ಆಹಾರ
ಕೊರೋನಾ ಬರುವ ಮುನ್ನಾ ರಸ್ತೆಯಲ್ಲಿ ಬಿದ್ದಿರುವ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಂಗ್ರಹಿಸಿ, ಬಸ್‌ನಿಲ್ದಾಣದ ತಂಗುದಾಣಲ್ಲಿನ ಕಸವನ್ನು ಸ್ವಚ್ಚಗಳಿಸುತ್ತಿದ್ದರು, ಪ್ರಾಣಿಪಕ್ಷಿಗಳ ಸಂತತಿ ಉಳಿವಿಗಾಗಿ ಪ್ರಾಣಿಪಕ್ಷಿಗಳಿಗೆ ತೀವ್ರ ಬರಗಾಲದ ಬೇಸಿಗೆಯ ಸಂದರ್ಭದಲ್ಲಿ ಕೆರೆ ಅಂಗಳದ ಗುಂಡಿಗಳಲ್ಲಿ ನೀರು ತುಂಬಿಸಿ ಪಕ್ಷಿಗಳಿಗೆ ಆಹಾರವನ್ನು ನೀಡುತ್ತಿದ್ದರು.
ವೀರಭೂಮ್ಮನಹಳ್ಳಿ ಗೇಟ್, ಕಾಟನಹಳ್ಳಿ, ಗೋಪಿಕುಂಟೆ, ಕರಿರಾಮನಹಳ್ಳಿ ಕೆರೆ ಕದಿರೇಹಳ್ಳಿ ಗುಟ್ಟೆ, ಭೂನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಗೀಡಗಳ ಸಸಿಯನ್ನು ನಾಟಿ ಮಾಡಿ ನೀರು ಹಾಕಿ ಪೋಶಿಸಲಾಗಿದೆ. ಆಲದಮರ, ಅರಳಿಮರ, ಹುಣಸೇಮರ ಹೀಗೆ ೧೫೦ ಗೋಡಂಬಿ ಸಸಿಗಳನ್ನು ನೆಡಲಾಗಿದೆ, ರೈತರಿಗೆ ವಿವಿದ ತಳಿಯ ಸಸಿಗಳನ್ನು ನೀಡಿದ್ದು ಉತ್ತಮವಾಗಿ ಬೆಳೆದು ನಿಂತಿವೆ.
ಪರಿಸರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪರಿಸರ ಮಾಲಿನ್ಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವರು. ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಸುಂದರ ಸ್ವಚ್ಛ ಪರಿಸರದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.
ಜತೆ ಜತೆಗೆ ತನ್ನಲ್ಲಿ ಸುಂದರ ಹಾಗೂ ಸ್ವಚ್ಚಪರಿಸರದ ಕಲ್ಪನೆಯನ್ನು ಜೀವನದ ಉಸಿರನ್ನಾಗಿಸಿಕೊಂಡಿದ್ದಾರೆ. ಬಿರುಬಿಸಲಿನ ಭಾಗದಲ್ಲಿ ಹಸಿರುಹೊಮ್ಮಿಸುವ ಮಹತ್ವದ ಕೆಲಸ ಮಾಡಿ ಸಾರ್ವಜನಿರಿಂದ ಪರಿಸರ ಪ್ರೇಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪರಿಸರವೇ ನಮ್ಮ ತಾಯಿದೇವರು ಎಂದು ನಂಬಿರುವ ಎಲ್.ಮಂಜುನಾಥ ನಿಸ್ವಾರ್ಥವಾಗಿ ಪರಿಸರ ಸಂರಕ್ಷಣೆಗೆ ಮುಂದಾಗಿರುವುದು ನೋಡುಗರಲ್ಲಿ ಬೆರಗು ಮೂಡಿಸಿದೆ.
ಪರಿಸರ ಜೋತೆಗೆ ಶುಚ್ಚಿತ್ವ ಮಾಡಿ ಜನ ಮೆಚ್ಚುಗೆಗೆ ಪಾತ್ರದಾರರಾಗಿದ್ದಾರೆ, ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಇವರಂತೆ ಕಾಯಕ ಮಾಡಿದರೆ ಎಲ್ಲಡೆ ಸುಂದರ ಶುಚ್ಚಿತ್ವವನ್ನು ಕಾಪಡಲು ಸಾಧ್ಯವಾಗುವಿದೆ. ಸ್ವಚ್ಚತೆ ಇರುವಲ್ಲಿ ದೇವರು ನೆಲೆಸಿದ್ದಾನೆ ಎಂಬುದನ್ನು ಮನಗಂಡಿರುವ ಅವರು ಸೇವೆಯನ್ನು ತೊಡಗಿಸಿಕೊಂಡಿದ್ದಾರೆ.
ಪ್ರಶಸ್ತಿಗೆ ಆಯ್ಕೆ
ಇವರ ಸೇವೆಯನ್ನು ಗುರ್ತಿಸಿದ ಸುವರ್ಣ ಛಾರಿಟಬಲ್ ಟ್ರಸ್ಟ್ನ ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ(ರಿ), ದಿಯಾ ಇಂಟರ್ ನ್ಯಾಷನಲ್ ಛಾರಿಟಬಲ್ ಟ್ರಸ್ಟ್ (ರಿ), ತುಮಕೂರು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯೋಗದೊಂದಿಗೆ “ಪರಿಸರ” ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಠ ಸೇವೆಯನ್ನು ಗುರ್ತಿಸಿ ೨೦೧೯-೨೦ ಸಾಲಿನ “ಸುವರ್ಣಶ್ರೀ” ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ,

 

ಫ್ರೆಶ್ ನ್ಯೂಸ್

Latest Posts

Featured Videos