ಇಂಗ್ಲೆಂಡ್ 85 ರನ್ ಗೆ ಆಲೌಂಟ್

ಇಂಗ್ಲೆಂಡ್ 85 ರನ್ ಗೆ ಆಲೌಂಟ್

ಲಂಡನ್, ಜು.25 : ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಟೆಸ್ಟ್ ನ ಮೊದಲ ದಿನದ ಲಂಚ್ ವಿರಾಮಕ್ಕೆ ಮೊದಲೇ ಇಂಗ್ಲೆಂಡ್ ಆಲೌಟ್ ಆಯಿತು. ವಿಶ್ವ ಚಾಂಪಿಯನ್ ಇಂಗ್ಲೆಂಡ್ ಇಂದಿಲ್ಲಿ ಆರಂಭವಾದ ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 85 ರನ್ ಗಳಿಗೆ ಗಂಟುಮೂಟೆ ಕಟ್ಟಿದೆ. ಇಂಗ್ಲೆಂಡ್ ನಾಯಕ ಜೋ ರೂಟ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಐರ್ಲೆಂಡ್ ವೇಗಿ ಟಿಮ್ ಮುರ್ತಾಗ್ ಆತೀಥೇಯ ಬ್ಯಾಟ್ಸ್ ಮೆನ್ ಗಳಿಗೆ ಆಘಾತ ನೀಡಿದರು. ಮುರ್ತಾಗ್ 13 ರನ್ ನೀಡಿ ಐದು ವಿಕೆಟ್ ಪಡೆದು ಮಿಂಚಿದರು. ಮಾರ್ಕ್ ಡಿಚರ್ಡ್ ಅಡೈರ್ 32 ರನ್ ಗಳಿಗೆ ಮೂರು ಮತ್ತು ಬೊಯ್ಡ್ ರಾನ್ಕಿನ್ ಐದು ರನ್ ಗೆ ಎರಡು ವಿಕೆಟ್ ಉರುಳಿಸಿದರು.
ಇಂಗ್ಲೆಂಡ್ ಪರವಾಗಿ ಜೋ ಡೆನ್ಲೆ 23 ರನ್ ಬಾರಿಸಿದ್ದು ಸ್ಕೋರ್ ಪಟ್ಟಿಯ ಗರಿಷ್ಠ ರನ್. ಟೆಸ್ಟ್ ಪಾದರ್ಪಣೆ ಮಾಡಿದ ಆಲಿ ಸ್ಟೋನ್ 19 ರನ್ ಬಾರಿಸಿದರು.
ಲಾರ್ಡ್ಸ್ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡ ಲಂಚ್ ವಿರಾಮಕ್ಕೆ ಮೊದಲೇ ಆಲೌಟ್ ಆಗಿದೆ. ಇಂಗ್ಲೆಂಡ್ ಕೇವಲ 23.4 ಓವರ್ ಗಳಲ್ಲಿ ಆಲೌಟ್ ಆಗಿರುವುದು ಇದುವರೆಗಿನ ಐದನೇ ಅತೀ ಕನಿಷ್ಠ ಟೆಸ್ಟ್ ಇನ್ನಿಂಗ್ಸ್ ಆಟವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos