ಬಿಜೆಪಿ ಆಟ ಅಂತ್ಯ: ದೇವೇಂದ್ರ ಫಡ್ನವಿಸ್ ರಾಜೀನಾಮೆ

ಬಿಜೆಪಿ ಆಟ ಅಂತ್ಯ: ದೇವೇಂದ್ರ ಫಡ್ನವಿಸ್ ರಾಜೀನಾಮೆ

ಮುಂಬೈ, ನ. 26: ಹುಮತ ಸಾಬೀತು ಪಡಿಸಲು ಸಾಕಷ್ಟು ಸರ್ಕಸ್​ ಮಾಡಿದ ಬಿಜೆಪಿ ಕಡೆಗೆ ಸೋಲೊಪ್ಪಿಕೊಂಡಿದೆ. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಎನ್​ಸಿಪಿ ರೆಬೆಲ್​ ನಾಯಕ ಅಜಿತ್​ ಪವಾರ್​​ ರಾಜೀನಾಮೆ ನೀಡಿದ ಬೆನ್ನಲ್ಲೇ, ಪತ್ರಿಕಾಗೋಷ್ಠಿ ಕರೆದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲ ಕ್ಷಣಗಳ ಹಿಂದೆಯಷ್ಟೆ ದೇವೇಂದ್ರ ಫಡ್ನವಿಸ್ ಅವರು ತಮ್ಮ ರಾಜೀನಾಮೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.

ಇನ್ನೂ ತಾವು ರಾಜೀನಾಮೆ ನೀಡುವ ಬಗ್ಗೆ ಹೇಳಿಕೆ ಕೊಡುವ ಮುನ್ನ ಮಾತನಾಡಿದ ದೇವೇಂದ್ರ ಫಡ್ನವಿಸ್ ಅವರು ಚುನಾವಣೆಗೂ ಮುನ್ನ ಅಥಾವ ನಂತರ ಶಿವಸೇನೆಗೆ ಸಿಎಂ ಸ್ಥಾನ ನೀಡುವ ಬಗ್ಗೆ ಯಾವುದೇ ನಡವಳಿಕೆ ಮಾಡಿಕೊಂಡಿರಲಿಲ್ಲ. ಇದಲ್ಲದೇ ಚುನಾವಣಾ ಫಲಿತಾಂಶದ ಬಳಿಕ ಶಿವಸೇನೆ ಚೌಕಸಿ ಮಾಡುವುದಕ್ಕೆ ಶುರುಮಾಡಿತ್ತು. ಶಿವಸೇನೆಯೊಂದಿಗೆ ನಾವು ಅಧಿಕಾರ ನಡೆಸುವುದಕ್ಕೆ ಸಾಕಷ್ಟ ದಿವಸ ಕಾಯ್ದವು, ಆದರೆ ಶಿವಸೇನೆ ತಮ್ಮ ಪಟ್ಟನ್ನು ಬಿಟ್ಟುಕೊಡಲಿಲ್ಲ.

ಇನ್ನು ಇದಕ್ಕೂ ಮುನ್ನ ಉಪಮುಖ್ಯಮಂತ್ರಿ ಸ್ಥಾನಕ್ಕೆ ಎನ್ಸಿಪಿಯ ಅಜಿತ್ ಪವಾರ್ ರಾಜೀನಾಮೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ದೇವೇಂದ್ರ ಫಡ್ನವಿಸ್ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ನವೆಂಬರ್ 27, ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಪಡಿಸಲು ಸುಪ್ರೀಂ ಕೋರ್ಟ್ ಆದೇಶಿಸಿದ ಹಿನ್ನೆಲೆ ಬಿಜೆಪಿ ಸದನದಲ್ಲಿ ಮುಖಭಂಗವನ್ನು ಅನುಭವದಿಂದ ಪಾರಾಗುವ ನಿಟ್ಟಿನಲ್ಲಿ ದೇವೇಂದ್ರ ಫಡ್ನವಿಸ್ ರಾಜೀನಾಮೆಗೆ ಮುಂದಾಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos