ಬಿಬಿಎಂಪಿ ನಲ್ಲಿ ಉದ್ಯೋಗವಕಾಶ

ಬಿಬಿಎಂಪಿ ನಲ್ಲಿ ಉದ್ಯೋಗವಕಾಶ

ಬೆಂಗಳೂರು, ಸೆ. 9: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಿರುದ್ಯೋಗಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಬಿಬಿಎಂಪಿಯ 4 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಬಿಬಿಎಂಪಿಯಲ್ಲಿ ಘನತಾಜ್ಯ ನಿರ್ವಹಣೆ ಹಾಗೂ ವಿವಿಧ ಸ್ವಚ್ಛತಾ ಕಾರ್ಯಗಳ ನಿರ್ವಹಣೆಗಾಗಿ ಘನತಾಜ್ಯ ನಿರ್ವಹಣೆ ವಿಭಾಗದಲ್ಲಿ ಭರ್ತಿ ಮಾಡಲು ನಿರ್ಧರಿಸಲಾಗಿದೆ. ಬಿಬಿಎಂಪಿ ಭರ್ತಿ ಮಾಡಲಿರುವ 4 ಸಾವಿರ ಹುದ್ದೆಗಳು ಗ್ರೂಪ್ ಡಿ ವೃಂದದ ಪೌರ ಕಾರ್ಮಿಕ ಹುದ್ದೆಗಳಾಗಿವೆ.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಶೀಘ್ರದಲ್ಲೇ ಬಿಬಿಎಂಪಿ ಅಧಿಕೃತ ವೆಬ್ ಸೈಟ್ ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಅಳವಡಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 9 ದಿನವಾಗಿದೆ. ಹುದ್ದೆಗಳಿಗೆ ಶೈಕ್ಷಣಿಕ ವಿದ್ಯಾರ್ಹತೆ ಅಗತ್ಯವಿಲ್ಲ. ಕನ್ನಡ ಭಾಷೆ ಮಾತನಾಡಬೇಕು. ಕನ್ನಡ ಜ್ಞಾನದ ಬಗ್ಗೆ ಸ್ವಯಂ ಘೋಷಣೆ ಪತ್ರ ಸಲ್ಲಿಸಬೇಕು. ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು.

 

ಫ್ರೆಶ್ ನ್ಯೂಸ್

Latest Posts

Featured Videos