ಎಲ್ಸ್ ಇಕೊ ಎಕ್ಸ್‌ಪರ್ಟ್‌ ಮಾರುಕಟ್ಟೆಗೆ

ಎಲ್ಸ್ ಇಕೊ ಎಕ್ಸ್‌ಪರ್ಟ್‌ ಮಾರುಕಟ್ಟೆಗೆ

ಹುಬ್ಬಳ್ಳಿ, ಜ. 2:  ಅರ್ತ್‌ ಮೂವಿಂಗ್ ಹಾಗೂ ನಿರ್ಮಾಣ ಸಾಧನಗಳ ಮುಂಚೂಣಿ ಉತ್ಸಾದನಾ ಸಂಸ್ಥೆಯಾದ ಜೆಸಿಬಿ ಇಂಡಿಯಾ, ಹುಬ್ಬಳ್ಳಿಯಲ್ಲಿ ಇತ್ತೀಚೆಗೆ 3ಡಿ ಎಲ್ಸ್ ಇಕೊ ಎಕ್ಸ್‌ಪರ್ಟ್‌ ಬ್ಯಾಕ್ ಲೋಡರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಕಂಪನಿಯ ಸಿಇಒ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ನೀಡಿದ್ದು, ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗು ಸಿಇಒ ಸುಬೀರ್‌ ಕುಮಾರ್ ಚೌಧರಿ ತಿಳಿಸಿದ್ದು ‘ನವೀನ ತಂತ್ರಜ್ಞಾನದ ಹೊಸ ಬ್ಯಾಕ್ ಲೋಡರ್ ಅನ್ನು ಶೇ  12ರಷ್ಟು ಇಂಧನ ಹಾಗೂ ನಿರ್ವಹಣೆಯಲ್ಲಿ ಶೇ 22ರಷ್ಟು ಉಳಿತಾಯವಾಗುವಂತ ವಿನ್ಯಾಸಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಜೆಸಿಬಿ ಲೈವ್‍ಲಿಂಕ್’ಎಂದು ಕರೆಯಲಾಗುವ ವಾಸ್ತವ ಸಮಯದ ಫ್ಲೀಟ್ ನಿರ್ವಹಣೆಗೆ ಅವಕಾಶ ಮಾಡಿಕೊಡುವ ಅತ್ಯಾಧುನಿಕ ಟೆಲಿಮ್ಯಾಟಿಕ್ಸ್ ಅನ್ನು ಈ ಯಂತ್ರ ಹೊಂದಿದೆ. ಇಂಟರ್‌ನೆಟ್ ಆಫ್‌ ಥಿಂಗ್ಸ್(ಐಒಟಿ) ಮತ್ತು ನಿರ್ಮಾಣ ಸಾಧನದಲ್ಲಿ ಬಿಗ್  ಡಾಟಾದಂತಹ ಸ್ಮಾರ್ಟ್‍ ತಂತ್ರಜ್ಞಾನಗಳನ್ನು ಸಂಯೋಜಿಸುವಲ್ಲಿ ಜೆಸಿಬಿ ಪ್ರವರ್ತಕ ಸಂಸ್ಥೆಯಾಗಿದೆ’ ಎಂದು ಹೇಳಿದರು.

ಹೊಸ ಯಂತ್ರವು ಸ್ಮೂತ್ ಗೇರ್ ಶಿಫ್ಟ್, ಆಟೊ ಶಾಪ್, ಆಪರೇಟರ್‌ ಆರಾಮಕ್ಕಾಗಿ ಹೊಸ ಎರ್ಗೋನಾಮಿಕ್ ಆಸನಗಳು, ಎಲ್‌ಇಡಿ ದೀಪಗಳು ಸೇರಿದಂತೆ  30 ವಿನೂತನ  ಅಂಶಗಳನ್ನು ಒಳಗೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos