ಬೆಸ್ಕಾಂ ಸಿಬ್ಬಂದಿಗೆ ವಿದ್ಯುತ್ ಅಪಘಾತ ಸುರಕ್ಷತೆ ಜಾಗೃತಿ

ಬೆಸ್ಕಾಂ ಸಿಬ್ಬಂದಿಗೆ ವಿದ್ಯುತ್ ಅಪಘಾತ ಸುರಕ್ಷತೆ ಜಾಗೃತಿ

ಬೆಂಗಳೂರು, ಡಿ. 26: ಬೆಸ್ಕಾಂ ಸಿಬ್ಬಂದಿ ಅದರಲ್ಲೂ ಪವರ್ ಮನ್‌ಗಳು ವಿದ್ಯುತ್ ಅಪಘಾತ ತಡೆ ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ಬೆಸ್ಕಾಂ ಮುಖ್ಯ ಎಂಜಿನಿಯರ್ ರಾಮೇಗೌಡ ಹೇಳಿದ್ದಾರೆ.

ಬೆಸ್ಕಾಂ ಸಿಬ್ಬಂದಿಗೆ ವಿದ್ಯುತ್ ಅಪಘಾತ ಸುರಕ್ಷತೆ ಕುರಿತು ರೇಸ್ ಕೋರ್ಸ್ ರಸ್ತೆಯಲ್ಲಿರುವ ಬೆಸ್ಕಾಂ ಸಿಲ್ವರ್ ಜೂಬಿಲಿ ಆಡಿಟೋರಿಯಂನಲ್ಲಿ ನಡೆದ ಪವರ್ ಮನ್ ಗಳಿಗಾಗಿ ಆಯೋಜನೆ ಮಾಡಲಗಿದ್ದ ವಿದ್ಯುತ್ ಅಪಘಾತ ಸುರಕ್ಷತೆ ಜಾಗೃತಿ ಕಾರ್ಯಕ್ರಮದಲ್ಲಿ  ಸಹಾಯಕ ಕಾರ್ಯ ನಿರ್ವಹಾಕ ಎಂಜಿನಿಯರ್ ಸಿ.ಧನಂಜಯ ಅವರ ಅಧ್ಯಕ್ಷತೆ ವಹಿಸಿ ಜಾಗೃತಿ ಕುರಿತಾಗಿ  ಮಾತನಾಡಿದರು.

ಸಿಬ್ಬಂದಿ ಕಾರ್ಯ ನಿರತರಾಗಿದ್ದಾಗ ಆಗಬಹುದಾದ ಅಪಘಾತಗಳನ್ನು ತಡೆಯಲು ಬೆಸ್ಕಾಂ ಸಾಕಷ್ಟು ಮುಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಇತ್ತೀಚಿಗೆ ಆಧುನಿಕ ತಂತ್ರಜ್ಞಾನದ ಕ್ರಮಗಳನ್ನೂ ಅನುಸರಿಸಿದೆ. ಅದನ್ನುಸಿಬ್ಬಂದಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಬೆಸ್ಕಾಂನ ಸಹಾಯಕ ಕಾರ್ಯ ನಿರ್ವಹಾಕ ಎಂಜಿನಿಯರ್ ಸಿ.ಧನಂಜಯ ಮಾತನಾಡಿ, ಬೆಸ್ಕಾಂ ಸಿಬ್ಬಂದಿಯೇ ಕಂಪನಿಯ ಪ್ರಮುಖ ಆಧಾರ. ಆದ್ದರಿಂದ ಕಂಪನಿಗೆ ಸಿಬ್ಬಂದಿ ಸುರಕ್ಷತೆಗಾಗಿ ಸಾಕಷ್ಟು ಸುರಕ್ಷತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಾಗೆಯೇ ಉಪಘಾತ ತಡೆ ಕ್ರಮಗಳನ್ನೂ ಕೈಗೊಂಡಿದೆ. ಇದನ್ನ ಸಿಬ್ಬಂದಿ ತಿಳಿದುಕೊಳ್ಳಬೇಕು. ಈ ಮೂಲಕ ಬೆಸ್ಕಾಂನ್ನು ವಿದ್ಯುತ್ ಅಪಘಾತರ ಹಿತತ ಕಂಪನಿ ಮಾಡಬೇಕೆಂದರು.

ಮುಖ್ಯ ಲೆಕ್ಕಾಧಿಕಾರಿ ನಾರಾಯಣ ರೆಡ್ಡಿ ಮಾತನಾಡಿ, ಸಿಬ್ಬಂದಿ ಸುರಕ್ಷತೆ ಜತೆಗೆ ಕಂಪನಿ ಆದಾಯದ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕು. ಅದರಲ್ಲೂ ವಿದ್ಯುತ್ ಮಾಪಕ ಓದುಗರು ಬಿಲ್ ಪಾವತಿಸದವರಿಂದ ಸಕಾಲಕ್ಕೆ ಸಂಗ್ರಹಿಸಬೇಕು. ಆ ಮೂಲಕ ತಮ್ಮ ಉಪ ವಿಭಾಗವನ್ನು ಪ್ರಥಮ ಸ್ಥಾನಕ್ಕೆ ಏರಿಸಬೇಕೆಂದು ಕರೆ ನೀಡಿದರು. ಅಧೀಕ್ಷಕ ಎಂಜಿನಿಯರ್ ವಿಶ್ವನಾಥ ರಾವ್ ಸೋಲಂಕಿ, ಉಪ ಲೆಕ್ಕ ನಿಯಂತ್ರಣಾಧಿಕಾರಿ  ಗಂಗಾಧರ ರೆಡ್ಡಿ, ಕಾರ್ಯನಿರ್ವಾಹಕ  ಎಂಜಿನಿಯರ್  ನಾರಾಯಣಗೌಡ ಹಾಗೂ ಲೆಕ್ಕಾಧಿಕಾರಿ ರಾಮಚಂದ್ರ ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos