ವಿದ್ಯುತ್ ತಂತಿ ತುಳಿದು 4 ಜನರ ದುರ್ಮರಣ

ವಿದ್ಯುತ್ ತಂತಿ ತುಳಿದು 4 ಜನರ ದುರ್ಮರಣ

ಬೆಳಗಾವಿ, . 4, ನ್ಯೂಸ್ ಎಕ್ಸ್ ಪ್ರೆಸ್: ಇಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ತುಂಡಾಗಿದ್ದ ಬಿದ್ದಿದ್ದ ವಿದ್ಯುತ್ ತಂತಿ ತುಳಿದು 4 ಜನರು ದುರ್ಮರಣ ಹೊಂದಿದ ಘಟನೆ ನಡೆದಿದೆ.

ರೇವಪ್ಪಾ ಕಲ್ಲೋಳಿ(35), ಹೆಂಡತಿ ರತ್ನವ್ವಾ ಕಲ್ಲೋಳಿ(30), ಮಗ ಸಚ್ಚೀನ್ (8), ರೇವಪ್ಪನ ಅಣ್ಣನ ಮಗ ಕ್ರಿಷ್ಣಾ ಮೃತ ದುರ್ದೈವಿಗಳಾಗಿದ್ದಾರೆ. ನಿನ್ನೆ ಸಂಜೆ ಮಳಿಗಾಳಿಗೆ ತುಂಡಾಗಿ ಬಿದ್ದ ತಂತಿ. ಹೆಸ್ಕಾಂ ಅಧಿಕಾರಿಗಳಿಗೆ ತಂತಿ ತೆರವುಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು ಕೂಡ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಇಂದು ಬೆಳಗಿನ ಜಾವ ಕುಟುಂಬ ಸಮೇತ ಜಮೀನಿಗೆ ಹೋಗುತ್ತಿದ್ದ ದಂಪತಿಗಳು. 2 ಎತ್ತು ಸೇರಿ 4 ಜನರು ದುರ್ಮರಣಕ್ಕೀಡಾಗಿದ್ದಾರೆ. ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಬರುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos