ಚುನಾವಣೆಯಲ್ಲಿ ‘ಬ್ಯಾಲೆಟ್ ಪೇಪರ್’ ಬಳಸಲ್ಲ: ಚುನಾವಣಾ ಆಯುಕ್ತರ ಸ್ಪಷ್ಟನೆ!

ಚುನಾವಣೆಯಲ್ಲಿ ‘ಬ್ಯಾಲೆಟ್ ಪೇಪರ್’ ಬಳಸಲ್ಲ: ಚುನಾವಣಾ ಆಯುಕ್ತರ ಸ್ಪಷ್ಟನೆ!

ನವದೆಹಲಿ: ಭಾರತದಲ್ಲಿ ಚುನಾವಣೆಗೆ ಬಳಕೆ ಮಾಡುವ ಎಲೆಕ್ಟ್ರಾನಿಕ್​ ವೋಟಿಂಗ್​ ಮಷಿನ್​ಗಳನ್ನು (ಇವಿಎಂ) ಸುಲಭವಾಗಿ ಹ್ಯಾಕ್​ ಮಾಡಬಹುದು ಎಂದು ಲಂಡನ್‌ನಲ್ಲಿ ಇತ್ತೀಚಿಗೆ ನಡೆದ ಹ್ಯಾಕಥಾನ್‌ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ನೀಡಿದ್ದ ಸೈಯ್ಯದ್​ ಶೂಜಾ ಅವರ ಪ್ರತಿಪಾದನೆಯನ್ನು ಮತ್ತೆ ಭಾರತೀಯ ಚುನಾವಣಾ ಆಯೋಗ ನಿರಾಕರಿಸಿದ್ದು, ಚುನಾವಣೆಯಲ್ಲಿ ಮತಪತ್ರ (ಬ್ಯಾಲೆಟ್ ಪೇಪರ್)ಗಳನ್ನು ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಕೇಂದ್ರ ಚುನಾವಣೆ ಆಯುಕ್ತ ಸುನಿಲ್​ ಅರೋರಾ, ಯಾವುದೇ ಕಾರಣಕ್ಕೂ ಮತಪತ್ರಗಳನ್ನು ಬಳಸುವುದಿಲ್ಲ. ಮರಳಿ ಮತಪತ್ರಗಳ ಯುಗಕ್ಕೆ ಹೋಗಲು ಸಾಧ್ಯವಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.

ಮತಯಂತ್ರ ಬಳಕೆಗೆ ಸಂಬಂಧಿಸಿದಂತೆ ಮತದಾರರು, ಪಕ್ಷಗಳ ಯಾವುದೇ ಟೀಕೆ, ಪ್ರತಿಕ್ರಿಯೆಗಳಿಗೆ ನಾವು ಮುಕ್ತರಾಗಿದ್ದೇವೆ. ಆದರೆ ಮತಪತ್ರಗಳಿಗೆ ಮರಳುವ ಯಾವುದೇ ಒತ್ತಾಯಕ್ಕೂ ನಾವು ಮಣಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಒಟ್ಟಿನಲ್ಲಿ ಆಯುಕ್ತರ ಈ ಸ್ಪಷ್ಟನೆ, 2019ರ ಲೋಕಸಭಾ ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸಬೇಕೆಂದು ಆಗ್ರಹಿಸುತ್ತಿರುವವರಿಗೆ ಹಿನ್ನಡೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos