‘ಪಿಎಂ ನರೇಂದ್ರ ಮೋದಿ’ ಸಿನಿಮಾದ ನಾಲ್ವರು ನಿರ್ಮಾಪಕರಿಗೆ, 2 ದಿನಪತ್ರಿಕೆಗಳಿಗೆ ನೋಟಿಸ್!

‘ಪಿಎಂ ನರೇಂದ್ರ ಮೋದಿ’ ಸಿನಿಮಾದ ನಾಲ್ವರು ನಿರ್ಮಾಪಕರಿಗೆ, 2 ದಿನಪತ್ರಿಕೆಗಳಿಗೆ ನೋಟಿಸ್!

ನವದೆಹಲಿ, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ‘ಪಿಎಂ ನರೇಂದ್ರ ಮೋದಿ’ ಸಿನಿಮಾದ ನಾಲ್ವರು ನಿರ್ಮಾಪಕರಿಗೆ ಚುನಾವಣಾ ಆಯೋಗದ ಪೂರ್ವ ದೆಹಲಿ ರಿಟರ್ನಿಂಗ್ ಅಧಿಕಾರಿ ಮಹೇಶ್ ನೋಟಿಸ್ ಜಾರಿಗೊಳಿಸಿದ್ದಾರೆ.

ರಾಜಕೀಯ ಹಿತಾಸಕ್ತಿಯಿಂದ ಸಿನಿಮಾ ನಿರ್ಮಿಸಲಾಗಿದ್ದು, ಚುನಾವಣಾ ನೀತಿಸಂಹಿತೆ ಉಲ್ಲಂಘಿಸುತ್ತಿದೆ ಎಂದು ಎಡ ಪಕ್ಷಗಳು ಮತ್ತು ಕಾಂಗ್ರೆಸ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.  ಇನ್ನು ಇದೇ ವಿಚಾರವಾಗಿ ಪ್ರಚಾರಕ್ಕೆ ಸಿನಿಮಾದ ಪೋಸ್ಟರ್​ ಪ್ರಕಟಿಸಿದ 2  ದಿನಪತ್ರಿಕೆಗಳಿಗೂ ಆಯೋಗ ನೋಟಿಸ್ ನೀಡಿದೆ.

ಆಯೋಗ ನೀಡಿರುವ ನೋಟಿಸ್‌ಗೆ ಉತ್ತರಿಸಲು ಮಾ.30ರವರೆಗೂ ಕಾಲಾವಕಾಶ ನೀಡಲಾಗಿದೆ ಎಂದು ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧರಿತ ‘ಪಿಎಂ ನರೇಂದ್ರ ಮೋದಿ’ಸಿನಿಮಾವನ್ನು ಏ.5ರಂದು ಬಿಡುಗಡೆಗೊಳಿಸಲು ಚಿತ್ರ ತಂಡ ಸಿದ್ಧತೆ ನಡೆಸಿತ್ತು.

ಫ್ರೆಶ್ ನ್ಯೂಸ್

Latest Posts

Featured Videos