ಈದ್ ಮಿಲಾದ್ : ಮದ್ಯ ಮಾರಾಟ ನಿಷೇಧ

ಈದ್ ಮಿಲಾದ್ : ಮದ್ಯ ಮಾರಾಟ ನಿಷೇಧ

ಬೆಂಗಳೂರು, ನ. 6 : ಈದ್ ಮಿಲಾದ್ ಹಬ್ಬದ ಪ್ರಯುಕ್ತ ನ. 10ರಂದು ನಸುಕಿನ 1 ಗಂಟೆಯಿಂದ ಮದ್ಯರಾತ್ರಿ 12 ವರಿಗೆ ನಗರದಾದ್ಯಂತ ಮದ್ಯ ಮಾರಾಟ ನಿಷೇಧಿಸಿಲಾಗಿದೆ.
ಈದ್ ಮಿಲಾದ್ ಹಬ್ಬವನ್ನು ನ.10ರಂದು ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಸಿ ನಂತರ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳು, ಧ್ವನಿವರ್ಧಕಗಳನ್ನು ಉಪಯೋಗಿಸಿಕೊಂಡು ಆಯುಧ ಹಾಗೂ ಇನ್ನಿತರೆ ವಸ್ತುಗಳಖನ್ನು ಪ್ರದರ್ಶಿಸಿ ಕುಣಿಯುತ್ತ ರಸ್ತೆ, ವಾಹನಗಳಲ್ಲಿ ಮೆರವಣಿಗೆಯಲ್ಲಿ ಹೆಚ್ಚಿನ ಜನರು ಭಾಗವಹಿಸಲಿದ್ದು, ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕಿಡಿಗೇಡಿ ಕೃತ್ಯಗಳನ್ನೆಸಗಿ ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಭಂಗವನ್ನುಂಟುಮಾಡುವ ಸಂಭವವಿರುವುದಾಗಿ ಮಾಹಿತಿ ಮೇರೆಗೆ ಅಂದು ಮದ್ಯಮಾರಾಟ ನಿಷೇಧಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos