ಶಿಕ್ಷಣ ಜೀವನಕ್ಕೆ ದಾರಿ: ಡಿ.ಕೆ ಮೊಹನ್ ಬಾಬು

ಶಿಕ್ಷಣ ಜೀವನಕ್ಕೆ ದಾರಿ: ಡಿ.ಕೆ ಮೊಹನ್ ಬಾಬು

ಕೆಆರ್ಪುರ, ಅ. 29: ಶಿಕ್ಷಣ ಜೀವನಕ್ಕೆ ದಾರಿಯಾಗುತ್ತದೆ, ಎಂದು ಕೇಂಬ್ರಿಡ್ಜ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಡಿ.ಕೆ.ಮೋಹನ್ ಬಾಬು ತಿಳಿಸಿದರು.

ಹೂಡಿಯಲ್ಲಿ ಡ್ಯಾನ್ಕೇರ್ ಐಟಿ ಹಾಗೂ ನೀಡ್ ಬೇಸ್ ಇಂಡಿಯಾ, ಚಾಂಪಿಯನ್ಸ್ ಬಾಯ್ಸ್ ಅಂಡ್ ಗಲ್ಸ್ ಹೋಮ್ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳೊಂದಿಗೆ ದೀಪಾವಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಊಟ ನೀಡಿದರೆ ಒಂದು ಹೊತ್ತಿಗೆ ಹೊಟ್ಟೆ ತುಂಬುತ್ತದೆ ಅದೇ ಊಟು ಪಡೆಯೋ ಶಿಕ್ಷಣ ಕಲಿಸಿದರೆ ಜೀವನದುದ್ದಕ್ಕೂ ಬದುಕುವ ದಾರಿ ಸಿಕ್ಕಂತಾಗುತ್ತದೆ ಆದ್ದರಿಂದ ಬಡವರಿಗೆ ಶಿಕ್ಷಣ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು. ಶಿಕ್ಷಣ ಸಂಸ್ಥೆಗಳು ಕಟ್ಟಿದರೆ ಸಾಲದು ಬಡವರಿಗೆ ಯಾವ ರೀತಿ ಶಿಕ್ಷಣ ನೀಡುತ್ತಿದ್ದಾರೆ ಎಂಬುದು ಮುಖ್ಯ ಎಂದು ಹೇಳಿದರು.

ಹೆಣ್ಣು ಮಕ್ಕಳು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ಸಾಧಿಸಿ ತೋರಿಸಿದ್ದಾರೆ ಅದೇ ಮಾದರಿ ಹೆಣ್ಣು ಮಗು ಇರುವ ಪ್ರತಿಯೊಂದು ಮನೆಯಲ್ಲೂ ಅವರಿಗೆ ಸಂಪೂರ್ಣ ಶಿಕ್ಷಣ ಸಿಕ್ಕಿದಾಗ ಮಾತ್ರ, ಆಗ ಮನೆಯೇ ಒಂದು ಶಾಲೆಯಾಗಿ ಮಾರ್ಪಡುತ್ತದೆ ಎಂದು ತಿಳಿಸಿದರು.

10 ನೇ ತರಗತಿ ವರೆಗೂ ಎಲ್ಲ ಸೌಲಭ್ಯದೊಂದಿಗೆ ಉಚಿತ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ, ಈ ಮಕ್ಕಳಿಗೆ ಅವಶ್ಯಕತೆ ಇದ್ದರೆ ನಮ್ಮ ಸಂಸ್ಥೆಯಿಂದ ಶಿಕ್ಷಕರನ್ನು ಕಲಿಸಿ ಇನಷ್ಟು ಉತ್ತೇಜನಕ್ಕೆ ಅವಕಾಶ ಮಾಡಿಕೊಡುತ್ತೇನೆ ಎಂದು ಹೇಳಿದರು. ಕೇಂಬ್ರಿಡ್ಜ್ ಸಮೂಹ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳಿಂದ ಕೇಂಬ್ರಿಡ್ಜ್ ಸೋಶಿಯಲ್ ಇನ್ಶೇಟಿವ್ ಗ್ರೂಪ್ ಮಾಡಿಕೊಂಡು ಬಡ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕೆಲಸ ಮಾಡಬೇಕು, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರು ಇತಿಹಾಸ ಸೃಷ್ಟಿಸಿದ್ದಾರೆ ಅದನ್ನು ಅರಿತು ವಿದ್ಯೆ ಕಲಿಯಿರಿ ಎಂದು ಹೇಳಿದರು.

ಕೆಆರ್ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಬಡ ಮಕ್ಕಳ ಅಭಿವೃದ್ಧಿಗೆ ವೈಯಕ್ತಿಕವಾಗಿ ಹಾಗೂ ನಮ್ಮದೇ ಟ್ರಸ್ಟ್ ಮೂಲಕ ಸಹಾಯ ಮಾಡುತ್ತಿದ್ದು ಯಾವುದೇ ಸಮಸ್ಯೆ ಬಂದರೆ ನಮ್ಮನ್ನು ಸಂಪರ್ಕಿಸುವಂತೆ ತಿಳಿಸಿದರು.

ದೀಪಾವಳಿ ಹಬ್ಬದ ಅಂಗವಾಗಿ ಎಲ್ಲಾ ಮಕ್ಕಳಿಗೆ ಹೊಸ ಬಟ್ಟೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಯರಾಂ, ಗುರುಸ್ವಾಮಿ, ಸುದರ್ಶನ್, ರೋಹಿತ್, ಸಂತೋಶ್, ರವೀಂದ್ರ, ಲಕ್ಷ್ಮಣ್ ಮತ್ತಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos