ಹೆಚ್ಚಾಗಿ ಪಪ್ಪಾಯಿ ತಿನ್ನುವುದು ಉತ್ತಮವಲ್ಲಾ!

ಹೆಚ್ಚಾಗಿ ಪಪ್ಪಾಯಿ ತಿನ್ನುವುದು ಉತ್ತಮವಲ್ಲಾ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಅರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ನಮ್ಮ ಸುತ್ತಾಮುತ್ತಾ ಸಿಗುವ ಪದಾರ್ಥಗಳಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು.

ವರ್ಷವಿಡೀ ಲಭ್ಯವಿರುವ ಅತ್ಯುತ್ತಮ ಹಣ್ಣುಗಳಲ್ಲಿ ಪಪ್ಪಾಯಿ ಕೂಡ ಒಂದು. ಪಪ್ಪಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವೈದ್ಯರು ಕೂಡ ಪಪ್ಪಾಯಿ ತಿನ್ನಲು ಸಲಹೆ ನೀಡುತ್ತಾರೆ. ಆದರೆ ಪಪ್ಪಾಯಿ ಎಲ್ಲರಿಗೂ ಒಳ್ಳೆಯದಲ್ಲ ಎಂಬುದು ಹಲವರಿಗೆ ತಿಳಿದಿಲ್ಲ. ಪಪ್ಪಾಯಿಯನ್ನು ಕೆಲವು ಸಮಸ್ಯೆಗಳಿರುವವರು ತಿನ್ನಬಾರದು.

ಪ್ರಕೃತಿಯಲ್ಲಿ ದೊರೆಯುವ ವಿವಿಧ ಹಣ್ಣುಗಳಲ್ಲಿ ಪಪ್ಪಾಯಿ ಅತ್ಯಂತ ಅದ್ಭುತವಾಗಿದೆ. ಇದು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಬಿ, ವಿಟಮಿನ್ ಕೆ, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾಗಿಯೇ ಪಪ್ಪಾಯಿ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಪಪ್ಪಾಯಿ ಒಳ್ಳೆಯದಲ್ಲ ಎಂದು ವೈದ್ಯರು ಸೂಚಿಸುತ್ತಾರೆ.

ಅಲರ್ಜಿ ಸಮಸ್ಯೆ ಇರುವವರು ಪಪ್ಪಾಯಿಯನ್ನು ತ್ಯಜಿಸಬೇಕು. ಏಕೆಂದರೆ ಪಪ್ಪಾಯಿಯ ಹಾಲು ಅಲರ್ಜಿಯನ್ನು ಉಂಟು ಮಾಡುತ್ತದೆ. ಪಪ್ಪಾಯಿಯನ್ನು ಗರ್ಭಿಣಿಯರು ತಿನ್ನಬಾರದು. ಇದರಲ್ಲಿರುವ ಪಾಪೈನ್ ಗರ್ಭದಲ್ಲಿರುವ ಮಗುವಿಗೆ ಹಾನಿ ಮಾಡುತ್ತದೆ.  ಪಪ್ಪಾಯಿಯನ್ನು ಮಿತಿ ಮೀರಿ ತಿನ್ನುವುದರಿಂದ ಗ್ಯಾಸ್, ಹೊಟ್ಟೆ ಉಬ್ಬುವುದು ಮತ್ತು ಅತಿಸಾರ ಸಮಸ್ಯೆಗಳು ಬರಬಹುದು. ಪಪ್ಪಾಯಿಯಲ್ಲಿ ವಿಟಮಿನ್ ಕೆ ಅಧಿಕವಾಗಿದೆ. ಇದರಿಂದ ರಕ್ತ ಬೇಗ ಹೆಪ್ಪುಗಟ್ಟುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos