ಹಿಂದಿನ ಆಹಾರ ಪದ್ಧತಿಯೇ ಶ್ರೇಷ್ಠ

ಹಿಂದಿನ ಆಹಾರ ಪದ್ಧತಿಯೇ ಶ್ರೇಷ್ಠ

ಹುಳಿಯಾರು: ನಾವು ಇಂದು ಅನುಸರಿಸುತ್ತಿರುವ ಆಧುನಿಕ ಆಹಾರ ಪದ್ಧತಿಗಿಂತ ಪುರಾತನ ಆಹಾರ ಪದ್ಧತಿಯೇ ಆರೋಗ್ಯದ ರಕ್ಷಣೆಯಲ್ಲಿ ಅತ್ಯಂತ ಪರಿಣಾಮಕಾರಿಗಿತ್ತು ಎಂದು ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್‌ಎಚ್‌ವಿ ಅನಸೂಯಮ್ಮ ಹೇಳಿದರು.

ಹುಳಿಯಾರಿನ ವಿಜಯನಗರ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೋಷಣ್ ಅಭಿಯಾನ ಯೋಜನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರು ಸೊಪ್ಪು, ತರಕಾರಿ, ಹಣ್ಣು ಮತ್ತು ಕಾಳುಗಳನ್ನು ಜೈವಿಕ ಗೊಬ್ಬರವನ್ನು ಬಳಸಿ ಬೆಳೆದುಕೊಳ್ಳುತ್ತಿದ್ದರು. ಆದರೆ ಇಂದು ಕೇವಲ ವ್ಯಾಪಾರ ಮತ್ತು ಲಾಭದ ದೃಷ್ಟಿಯಾಗಿ ಬದಲಾಗಿದ್ದು ಗಣಮಟ್ಟದ ಆಹಾರ ಸೇವನೆಗೆ ಎಲ್ಲರೂ ಆಧ್ಯತೆ ನೀಡಬೇಕಿದೆ ಎಂದರು.
ಎಲ್ಲಾ ಪೋಷಕಾಂಶಗಳನ್ನೊಳಗೊಂಡ ಸಮತೂಕದ ಆಹಾರವನ್ನು ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ಸೇವಿಸಬೇಕು. ಈ ನಿಟ್ಟಿನಲ್ಲಿ ಅವರಿಗೆ ಅರಿವು ಮೂಡಿಸುವ ಸಲುವಾಗಿ ಪೋಷನ್ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಿರಿಯ ಪುರುಷ ಆರೋಗ್ಯ ಸಹಾಯಕ ರೇಣುಕಾರಾಜ್, ಎಎನ್‌ಎಂ ಮಧು, ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ, ಆಶಾ ಕಾರ್ಯಕರ್ತೆಯರು ಪೋಷಕರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos