ಪ್ರತಿದಿನ ಬೇಯಿಸಿದ ಮೊಟ್ಟೆ ಸೇವಿಸಿ

ಪ್ರತಿದಿನ ಬೇಯಿಸಿದ ಮೊಟ್ಟೆ ಸೇವಿಸಿ

ಬೆಂಗಳೂರು, ನ. 5 : ಬೇಯಿಸಿದ ಮೊಟ್ಟೆ ಆಕಾರದಲ್ಲಿ ಸಣ್ಣದಾಗಿದ್ದರೂ ಅದು ವಿಟಮಿನ್ ಪ್ರೋಟೀನ್ ಗಳ ಒಂದು ಸಂಮಿಶ್ರಣವಾಗಿದೆ. ಬೇಯಿಸಿದ ಮೊಟ್ಟೆಯಲ್ಲಿ ಪೊಟ್ಯಾಷಿಯಂ, ಐರನ್, ಜಿಂಕ್, ವಿಟಮಿನ್ ಇ ಮತ್ತು ಫೊಲೇಟ್ ಇವೆ. ಸಂಶೋಧನೆಗಳ ಪ್ರಕಾರ ಬೇಯಿಸಿದ ಮೊಟ್ಟೆಯಲ್ಲಿ 6.29 ಗ್ರಾಂನಷ್ಟು ಪ್ರೋಟೀನ್ ಇದ್ದು, 78 ಕ್ಯಾಲೋರಿಗಳಿವೆ.
ಹಸಿವು ನಿಯಂತ್ರಣ :
ಬೇಯಿಸಿದ ಮೊಟ್ಟೆಯು ನಿಮ್ಮ ದೇಹವನ್ನು ಭರ್ತಿಗೊಳಿಸಿ ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ. ಆದ್ದರಿಂದಲೇ ದೈಹಿಕ ತಜ್ಞರು ಬೇಯಿಸಿದ ಮೊಟ್ಟೆಯನ್ನು ವರ್ಕ್ ಔಟ್ ಗಿಂತ ಮುಂಚಿತವಾಗಿ ತಿನ್ನಲು ಉಪದೇಶಿಸುತ್ತಾರೆ. ಬೆಳಗ್ಗಿನ ಉಪಹಾರಕ್ಕೆ ಚೆನ್ನಾಗಿ ಬೇಯಿಸಿದ ಮೊಟ್ಟೆಯನ್ನು ನೀವು ತಿಂದಿರೆಂದರೆ ನಿಮ್ಮ ದಿನದ ಪ್ರಾರಂಭ ಉಲ್ಲಾಸ ಮತ್ತು ಉತ್ಸಾಹದಿಂದ ಕೂಡಿರುತ್ತದೆ.
ನಿಮ್ಮ ಕಣ್ಣುಗಳಿಗೆ ಉತ್ತಮ
ಬೇಯಿಸಿದ ಮೊಟ್ಟೆಯ ಒಂದು ಉಪಯೋಗವೆಂದರೆ ಇವು ಕಣ್ಣನ್ನು ಚೆನ್ನಾಗಿ ನೋಡಿಕೊಳ್ಳುತ್ತವೆ ಎಂಬುದಾಗಿದೆ. ನೀವು ನಿತ್ಯವೂ ಸೇವಿಸುವುದು ಕಣ್ಣಿನ ಬೆಳವಣಿಗೆಗೆ ಅವಶ್ಯಕವಾದ ಲ್ಯೂಟೀನ್ ಮತ್ತು ಝೇಕ್ಸಂಥೀನ್ ಅನ್ನು ಪೂರೈಸುವಂತೆ ಇವುಗಳು ಅಕ್ಷಿಪಟಲದ ಅವನತಿಯನ್ನು ತಡೆಯುತ್ತದೆ ಎಂಬುದು ಮಹತ್ವದ ಅಂಶವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos