ಉತ್ತಮ ಆರೋಗ್ಯಕ್ಕೆ ದ್ರಾಕ್ಷಿಹಣ್ಣು ಸೇವಿಸಿ

ಉತ್ತಮ ಆರೋಗ್ಯಕ್ಕೆ ದ್ರಾಕ್ಷಿಹಣ್ಣು ಸೇವಿಸಿ

ಬೆಂಗಳೂರು, ಡಿ. 30: ಸಾಮಾನ್ಯವಾಗಿ ಎಲ್ಲಾ ಹಣ್ಣುಗಳು ಒಂದಲ್ಲಾ ಒಂದು ಪ್ರೋಟಿನ್ ಅಂಶಗಳನ್ನು ಒಳಗೊಂಡಿರುತ್ತವೆ. ಬಹಳಷ್ಟು ಜನರು ದ್ರಾಕ್ಷಿಹಣ್ಣನ್ನು ಇಷ್ಟಪಡುತ್ತಾರೆ. ಇದರಲ್ಲಿ ಕ್ಯಾಲೋರಿ, ಫೈಬರ್, ವಿಟಮಿನ್ಸ್ ಹಾಗೂ ಮಿನರಲ್ಸ್ ಅಂಶಗಳು ಇರುತ್ತದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಲಾಭವಾಗುತ್ತದೆ. ಅಲ್ಲದೆ ಬ್ಯೂಟಿ ಪ್ರಾಬ್ಲಂ ಕೂಡ ದೂರವಾಗುತ್ತದೆ.

ದ್ರಾಕ್ಷಿ ಸೇವನೆಯಿಂದ ಬ್ಲಡ್ ಶುಗರ್ ಲೆವಲ್ ಕಂಟ್ರೋಲ್ ನಲ್ಲಿ ಇರುವುದಕ್ಕೆ ಸಹಾಯ ಮಾಡುತ್ತದೆ. ಹಾಗಾಗಿ ಡಯಾಬಿಟಿಸ್ ಇರುವವರು ದ್ರಾಕ್ಷಿಯನ್ನು ವೈದ್ಯರ ಸಲಹೆ ಮೇರೆಗೆ ಮಿತ ಪ್ರಮಾಣದಲ್ಲಿ ಸೇವಿಸಬಹುದು.

ಅರ್ಧ ತಲೆನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಹಣ್ಣನ ಜ್ಯೂಸ್ ಕುಡಿದರೆ ಕಡಿಮೆಯಾಗುತ್ತದೆ. ಹಾಗೆಯೇ ಹೃದಯ ಸಂಬಂಧಿ ಕಾಯಿಲೆ ಇರುವವರು ಪ್ರತಿ ದಿನ ದ್ರಾಕ್ಷಿ ತಿನ್ನುತ್ತಿದ್ದರೆ ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.

ಸಂಶೋಧನೆ ಪ್ರಕಾರ, ದಿನ 1 ಕಪ್ ದ್ರಾಕ್ಷಿ ಸೇವಿಸುವುದರಿಂದ ಸ್ತನದ ಕ್ಯಾನ್ಸರ್ ಶೇ.50ರಷ್ಟು ಕಡಿಮೆ ಆಗುತ್ತದೆ. ಇದರ ಹೊರತಾಗಿ ಹೃದಯದ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos