6.0 ತೀವ್ರತೆಯ ಭೂಕಂಪ

6.0 ತೀವ್ರತೆಯ ಭೂಕಂಪ

ಬೀಜಿಂಗ್, ಜೂ. 18: ನೈಋತ್ಯ ಚೀನಾದಲ್ಲಿ ಇಂದು 6.0 ತೀವ್ರತೆಯ ಭಾರೀ ಭೂಕಂಪ ಸಂಭವಿಸಿದ್ದು 11 ಜನರು ಸಾವನ್ನಪ್ಪಿದ್ದಾರೆ. 122 ಜನರು ಗಾಯಗೊಂಡಿದ್ದಾರೆ.

ಸಿಚುವಾನ್ ಪ್ರಾಂತ್ಯದ ಯಿಬಿನ್ ನಗರದ ಹೊರಗೆ ನೆಲದ 16 ಕಿ.ಮೀ ಆಳದಲ್ಲಿ ಈ ಭೂಕಂಪದ ಕೇಂದ್ರಬಿಂದುವಿತ್ತು ಎಂದು ಚೀನಾದ ಭೂಕಂಪ ಮಾಪನ ಕೇಂದ್ರ ತಿಳಿಸಿದೆ.

ಚಾಗ್ನಿಂಗ್ ಕೌಂಟಿಯಲ್ಲಿ 8 ಜನಹಾಗೂ ಕ್ವಿಕ್ಸಿಯಾನ್ ಕೌಂಟಿಯಲ್ಲಿ 3 ಜನ ಮೃತಪಟ್ಟಿದ್ದಾರೆ. ರಕ್ಷಣಾ ಸಿಬ್ಬಂದಿ ಕಟ್ಟಡದ ಅವಶೇಷಗಳ ಅಡಿಯಿಂದ 6 ಶವಗಳನ್ನು ಹೊರ ತೆಗೆದಿದ್ದು, 7 ಜನರನ್ನ ರಕ್ಷಿಸಿದ್ದಾರೆ ಎಂದು ಅಧಿಕೃತ ಸುದ್ದಿಸಂಸ್ಥೆ ಕ್ಸಿನುವಾ ತಿಳಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos