ದಕ್ಷಿಣ ಚೀನಾದಲ್ಲಿ ಭೂಕಂಪ

ದಕ್ಷಿಣ ಚೀನಾದಲ್ಲಿ ಭೂಕಂಪ

ಬೀಜಿಂಗ್, ನ. 25 : ದಕ್ಷಿಣ ಚೀನಾದ ಗ್ವಾಗ್ಸಿ ಸ್ವಾಯತ್ತ ಪ್ರದೇಶದಲ್ಲಿ ಸೋಮವಾರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆ 5.2 ರಷ್ಟು ದಾಖಲಾಗಿದೆ. ಬೆಳಗ್ಗೆ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ಚೀನಾ ಭೂಕಂಪ ಸಂಪರ್ಕ ಕೇಂದ್ರ (ಸಿಎನ್ ಸಿ) ತಿಳಿಸಿದೆ.
ತಕ್ಷಣಕ್ಕೆ ಸಾವು- ನೋವಿನ ಯಾವುದೇ ಮಾಹಿತಿ ಬಂದಿಲ್ಲ. ಕೆಲವು ಸೆಕೆಂಡಗಳ ಕಾಲ ಬಾರಿ ಭೂಮಿ ಕಂಪಿಸಿದೆ. ಜನತೆ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಗಾಬರಿಗೊಂಡು ಮನೆಗಳಿಂದ ಹೊರಗೋಡಿ ಬಂದರು.
ರಿಕ್ಟರ್ ಮಾಪನದಲ್ಲಿ 5.2 ತೀವ್ರತೆಯ ಭೂಕಂಪನ ದಾಖಲಾಗಿದ್ದು, 22.89 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 106.65 ಡಿಗ್ರಿ ಪೂರ್ವ ರೇಖಾಂಶದಲ್ಲಿ ಇದರ ಕೇಂದ್ರಸ್ಥಾನ ಪತ್ತೆಯಾಗಿದೆ. ಭೂಮಿಯ 10 ಕಿಮೀ ಆಳದವರಿಗೆ ಕಂಪನ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳಿಗೆ ಗುರಿಯಾಗುತ್ತಿವೆ.

ಫ್ರೆಶ್ ನ್ಯೂಸ್

Latest Posts

Featured Videos