ಒಟಿಟಿಗೆ ಬರಲಿದೆ ಡಂಕಿ

ಒಟಿಟಿಗೆ ಬರಲಿದೆ ಡಂಕಿ

ಬೆಂಗಳೂರು: ಶಾರುಖ್‌ ಖಾನ್‌ ನಟನೆಯ ಮೂರು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಾವಿರಾರು ಕೋಟಿ ಕಲೆಕ್ಷನ್‌ ಮಾಡಿ, ಸಕ್ಸಸ್‌ ಪಡೆದಿವೆ. ಪಠಾಣ್‌ ಮೂಲಕ ಆರಂಭವಾದ ಆ ಯಶಸ್ಸಿನ ಓಟ, ಅದಾದ ಮೇಲೆ ಜವಾನ್‌ ಸಿನಿಮಾ ಸಹ ಬ್ಲಾಕ್‌ ಬಸ್ಟರ್‌ ಹಿಟ್‌ ಆಯ್ತು.

ವರ್ಷಾಂತ್ಯಕ್ಕೆ ಬಂದ ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ಡಂಕಿ ಸಿನಿಮಾ ಈ ಹಿಂದಿನ ಎರಡು ಸಿನಿಮಾಗಳಷ್ಟು ಸದ್ದು ಮಾಡದಿದ್ದರೂ, ಡೀಸೆಂಟ್‌ ಮೊತ್ತ ಕಲೆ ಹಾಕಿ, ಆಟ ಮುಗಿಸಿತ್ತು. ಇದೀಗ ಇದೇ ಡಂಕಿ ಚಿತ್ರ ಒಟಿಟಿಗೆ ಎಂಟ್ರಿ ಕೊಡಲು ಸಿದ್ಧವಾಗಿದೆ.

ಕಳೆದ ವರ್ಷ, ಶಾರುಖ್ ಖಾನ್ ನಟನೆಯ ಪಠಾಣ್ ಮತ್ತು ಜವಾನ್ ಸಿನಿಮಾಗಳು ನಿರ್ಮಾಪಕರಿಗೆ ಸಾವಿರ ಸಾವಿರ ಕೋಟಿ ಹಣ ತಂದುಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿ ಡಂಕಿ ಸಿನಿಮಾ ಮೇಲೂ ಅದೇ ನಿರೀಕ್ಷೆ ಇತ್ತು. ಅದರ ಆಧಾರದ ಮೇಲೆಯೇ ಡಂಕಿ ಸಿನಿಮಾದ ಡಿಜಿಟಲ್‌ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಬಿಕರಿಯಾಗಿತ್ತು.

ಜಿಯೋ ಸಿನಿಮಾ ಡಂಕಿ ಸಿನಿಮಾದ OTT ಹಕ್ಕುಗಳನ್ನು ಬರೋಬ್ಬರಿ 155 ಕೋಟಿಗೆ ಖರೀದಿಸಿದೆ. ಈ ಮೂಲಕ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಒಟಿಟಿಗೆ ಸೇಲ್‌ ಆದ ಚಿತ್ರ ಎಂಬ ದಾಖಲೆ ಡಂಕಿ ಹೆಸರಿಗಿದೆ. ಶಾರುಖ್ ವೃತ್ತಿಜೀವನದಲ್ಲಿ ಅತಿ ಹೆಚ್ಚು ಮೊತ್ತಕ್ಕೆ OTTಗೆ ಮಾರಾಟವಾದ ಸಿನಿಮಾ ಸಹ ಇದಾಗಿದೆ. ಅಂದಹಾಗೆ ಇದೇ ಚಿತ್ರದ ಆಡಿಯೋ ಹಕ್ಕುಗಳನ್ನು 36 ಕೋಟಿಗೆ ಟಿ ಸೀರೀಸ್ ಖರೀದಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos