ಈಡೀ ದೇಶದ್ಯಾಂತ ತೆರೆಕಂಡ ಡಂಕಿ ಸಿನಿಮಾ!!

ಈಡೀ ದೇಶದ್ಯಾಂತ ತೆರೆಕಂಡ ಡಂಕಿ ಸಿನಿಮಾ!!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳು ಹೆಚ್ಚುತ್ತಾಯಿದೆ. ಅದರಲ್ಲಿಯೂ ಸಹ ಇಂದು ವಾರದಲ್ಲಿ ಘಟಾನು ಘಟಿಗಳ ಸಿನಿಮಾ ರೀಲೀಸ್‌ ಆಗುತ್ತಾದೆ.

ಈ ವರ್ಷ ಶಾರುಖ್​ ಖಾನ್​ ಅವರು ‘ಜವಾನ್​’, ‘ಪಠಾಣ್’ ಸಿನಿಮಾ ಮೂಲಕ ಮಾಸ್​ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಹಾಗಂತ ಒಂದೇ ಮಾದರಿಯ ಸಿನಿಮಾಗೆ ಅವರು ಗಂಟು ಬಿದ್ದಿಲ್ಲ. ಈಗ ತೆರೆಕಂಡಿರುವ ‘ಡಂಕಿ’ ಚಿತ್ರ ಸಖತ್​ ಕ್ಲಾಸ್​ ಆಗಿದೆ. ಇದರ ಕಥಾನಾಯಕ ಒಬ್ಬ ಸೂಪರ್​ ಹೀರೋ ಅಲ್ಲ. ಜನಸಾಮಾನ್ಯರ ನಡುವಿನ ವ್ಯಕ್ತಿಯ ರೀತಿ ಆ ಪಾತ್ರ ಇದೆ.

ನಟ ಶಾರುಖ್​ ಖಾನ್​ ಅವರು ಮೊದಲ ಬಾರಿಗೆ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಜೊತೆ ಕೈ ಜೋಡಿಸಿದ ಕಾರಣದಿಂದ ‘ಡಂಕಿ’ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಇಂದು ಈ ಸಿನಿಮಾ ಬಿಡುಗಡೆ ಆಗಿದೆ. ಕ್ಲಾಸ್​ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಹೆಚ್ಚಿನ ಮಸಾಲೆ ಅಂಶಗಳನ್ನು ಬಳಸಿಕೊಳ್ಳದೇ ಒಂದು ಕ್ಲಾಸ್​ ಸಿನಿಮಾ ನೀಡುವಲ್ಲಿ ನಿರ್ದೇಶಕ ರಾಜ್​ಕುಮಾರ್​ ಹಿರಾನಿ  ಅವರು ಯಶಸ್ವಿ ಆಗಿದ್ದಾರೆ. ಶಾರುಖ್ ಖಾನ್​ ಮಾತ್ರವಲ್ಲದೇ ಇತರೆ ಪಾತ್ರಧಾರಿಗಳೂ ‘ಡಂಕಿ’ ಸಿನಿಮಾದಲ್ಲಿ ಮಿಂಚಿದ್ದಾರೆ.

ಹಾರ್ಡಿ ಸಿಂಗ್ ದಿಲೋನ್​ ಎಂಬ ಮಾಜಿ ಸೈನಿಕನ ಪಾತ್ರದಲ್ಲಿ ಶಾರುಖ್​ ಖಾನ್​ ನಟಿಸಿದ್ದಾರೆ. ಅಚಾನಕ್​ ಆಗಿ ಅವರಿಗೆ ಒಂದು ಗೆಳೆಯರ ಗುಂಪು ಸಿಗುತ್ತದೆ. ಹೇಗಾದರೂ ಮಾಡಿ ಲಂಡನ್​ಗೆ ಹೋಗಬೇಕು ಎಂಬುದು ಅವರೆಲ್ಲರ ಕನಸು. ಆದರೆ ವೀಸಾ ಸಿಗುವುದು ಕಷ್ಟ. ಹಾಗಾಗಿ ಕಳ್ಳದಾರಿಯ ಮೂಲಕ ದೇಶದ ಗಡಿದಾಟುವ ಸಾಹಸಕ್ಕೆ ಅವರೆಲ್ಲ ಮುಂದಾಗುತ್ತಾರೆ. ಅಂತಿಮವಾಗಿ ಅವರು ಲಂಡನ್​ಗೆ ತೆರಳುತ್ತಾರಾ? ಅಲ್ಲಿ ಅವರು ಅಂದುಕೊಂಡಿದ್ದು ಈಡೇರುತ್ತೋ ಅಥವಾ ಇಲ್ಲವೋ ಎಂಬುದು ‘ಡಂಕಿ’ ಸಿನಿಮಾದ ಕಥೆ. ಇದರೊಳಗೆ ಸ್ನೇಹದ ಕಹಾನಿಯೂ ಇದೆ. ಮನಸ್ಸಿಗೆ ಇಷ್ಟವಾಗುವಂತಹ ಒಂದು ಲವ್​ಸ್ಟೋರಿಯೂ ಇದೆ.

 

ಫ್ರೆಶ್ ನ್ಯೂಸ್

Latest Posts

Featured Videos