ಬೆಂಗಳೂರಿಲ್ಲಿ ಮಾದಕ ದ್ರವ್ಯ ಮಾರಾಟ: ಎಸಿಬಿ ದಾಳಿ

ಬೆಂಗಳೂರಿಲ್ಲಿ ಮಾದಕ ದ್ರವ್ಯ ಮಾರಾಟ: ಎಸಿಬಿ ದಾಳಿ

ಬೆಂಗಳೂರು, ಮೇ. 2, ನ್ಯೂಸ್ ಎಕ್ಸ್ ಪ್ರೆಸ್: ನಮ್ಮ ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಮಾದಕ ದ್ರವ್ಯ ಮಾರಾಟ ಮಾಡುತ್ತಿರುವವರ ಮೇಲೆ ಎಸಿಬಿ ದಾಳಿ ನಡೆದಿದೆ.

ನಗರದ ಹೆಮ್ಮಿಗೇಪುರ ರುಪ್ಲೇಕ್ಸ್ ಲೇಔಟ್ ನಲ್ಲಿರುವ ನಿವಾಸದಲ್ಲಿ ಮಾದಕ ದ್ರವ್ಯ ಮಾರಾಟ ಜಾಲ ನಡೆಯುತ್ತಿದೆ ಎಂಬ ಶಂಕೆಯ ಮೇಲೆ ಎಸಿಬಿ ದಾಳಿ ನಡೆದಿದ್ದು, ಒಟ್ಟು 27 ಕೆಜಿ ಕೆಟಮಿನ್ ಡ್ರಗ್ಸ್ ಪತ್ತೆ ಮಾಡಿದ್ದಾರೆ.

ಇಂದು ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು,ಮನೆಯ ಅಡುಗೆ ಕೋಣೆಯಲ್ಲಿ ಕೆಜಿಗಟ್ಟಲೇ ಮಾದಕ ದ್ರವ್ಯ ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ಮೂಲದ ಕುಟುಂಬ 1 ವರ್ಷದಿಂದ ಆ ಮನೆಯಲ್ಲಿ ಬಾಡಿಗೆ ಇದ್ದರು. ಪತಿ, ಪತ್ನಿ ಮತ್ತು 3 ಜನರು ಮಕ್ಕಳು ವಾಸವಾಗಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos