ವೀಕಲಚೇತನರಿಂದ ಪಾರ್ಕ್ ಚಾಲನೆ

ವೀಕಲಚೇತನರಿಂದ ಪಾರ್ಕ್ ಚಾಲನೆ

ಹುಬ್ಬಳ್ಳಿ, ಫೆ. 17: ಇಲ್ಲಿನ ಕುಸುಗಲ್ ರಸ್ತೆ ಬಳಿಯ ಸ್ಪೋರ್ಟ್ಸ್ಪಾರ್ಕ್ಗೆ ಕೋಪನಕೊಪ್ಪದ ಮನೋವಿಕಾಸ ಬುದ್ಧಿಮಾಂದ್ಯ ಮಕ್ಕಳ ವಸತಿ ನಿಲಯದ ವಿದ್ಯಾರ್ಥಿಗಳು ಚಾಲನೆ ನೀಡಿದರು.

ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಎಂಎಲ್‌ಸಿ ಪ್ರದೀಪ ಶೆಟ್ಟರ್ ಅವರು ಆಗಮಿಸಿ, ಅಚ್ಚುಕಟ್ಟಾಗಿ ನಿರ್ಮಿಸಿದ ಸ್ಪೋರ್ಟ್ಸ್ ಪಾರ್ಕ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶಾಲ ಜಾಗದಲ್ಲಿ ನಿರ್ಮಿಸಿರುವ ಪಾರ್ಕ್ನಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣವಿದೆ. ಇಲ್ಲಿ ಟರ್ಫ್ ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಕಬಡ್ಡಿ, ಟ್ರ‍್ಯಾಂಪೋಲಿನ್ ಪಾರ್ಕ್, ಸೋಪ್ ಫುಟ್‌ಬಾಲ್, ಜಾರ್ಬಿಂಗ್ ಬಾಲ್, ಸ್ನೂಕರ್, ಟೇಬಲ್ ಟೆನಿಸ್, ಕೇರಂ, ಎಟಿವಿ ಬೈಕ್ ಮೈದಾನವಿದೆ. ಸುಮಾರು 25ರಿಂದ 30 ಆಟಗಳನ್ನಾಡಲು ಅನುಕೂಲವಿದೆ. ಎಲ್ಲ ವಯೋಮಾನದವರು ಭಾಗವಹಿಸಬಹುದು ಎಂದು ಮುಖ್ಯಸ್ಥ ಪ್ರದೀಪ್ ಜೈನ್ ತಿಳಿಸಿದರು.

ಪಾಲುದಾರರಾದ ರಾಜನ್ ಜೈನ್, ಆಶೀಶ್ ನಹಾಟ, ದಾನೇಶ್ ಕಟಾರಿಯಾ, ಚಿರಾಗ್ ಭಂಡಾರಿ, ಜೈನ್ ಸಮಾಜದ ಮುಖಂಡರಾದ ಭವರಲಾಲ್ ಜೈನ್, ಸುರೇಶ ಜೈನ್, ಮಾರುತಿ ಬಿಲ್ಸರ್ಸ್ನ ಪ್ಯಾರೆಲಾಲ್ ಪಿತಲಿಯಾ, ಮನೋವಿಕಾಸ ಬುದ್ಧಿಮಾಂದ್ಯ ಮಕ್ಕಳ ವಸತಿ ನಿಲಯ ಮುಖ್ಯಸ್ಥ ಡಾ.ಜೆ.ಕೆ. ಹಿರೇಮಠ ಇತರರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos