ಚುಚ್ಚುಮದ್ದು ವಾಹನ, ಸಹಾಯವಾಣಿಗೆ ಚಾಲನೆ

ಚುಚ್ಚುಮದ್ದು ವಾಹನ, ಸಹಾಯವಾಣಿಗೆ ಚಾಲನೆ

ಬೆಂಗಳೂರು:ಮಹಾನಗರ ಪಾಲಿಕೆ ಪಶುಪಾಲನಾ ವಿಭಾಗದಿಂದ ಪಾಲಿಕೆ ಕೇಂದ್ರ ಕಛೇರಿ ಆವರಣದಲ್ಲಿ ರೇಬೀಸ್ ಚುಚ್ಚುಮದ್ದು ನೀಡುವ ೩ ವಾಹನ ಹಾಗೂ ರೇಬಿಸ್ ಸಹಾಯವಾಣಿಗೆ
ಮೇಯರ್ ಗೌತಮ್ ಕುಮಾರ್, ಆಯುಕ್ತ ಮಂಜುನಾಥ್ ಪ್ರಸಾದ್ ಚಾಲನೆ ನೀಡಿದರು.

ನಗರದಲ್ಲಿ ನಾಯಿಗಳು ಕಚ್ಚಿದರೆ ಕೂಡಲೇ ಸ್ಥಳಕ್ಕೆ ತೆರಳಿ ನಾಯಿ ಹಿಡಿದು ಚುಚ್ಚುಮದ್ದು ನೀಡಲು
ಪಾಲಿಕೆ ಹಾಗೂ ಪ್ರಾಣಿದಯಾ ಸಂಘ-ಸAಸ್ಥೆಗಳ ಸಹಯೋಗದಲ್ಲಿ ನಾಯಿಗಳಿಗೆ ರೇಬೀಸ್
ಚುಚ್ಚುಮದ್ದು ನೀಡುವ ಪಾಲಿಕೆಯ ಮೂರು ವಾಹನ ಹಾಗೂ ಸಹಾಯವಾಣಿ ಸಂಖ್ಯೆ ೬೩೬೪೮೯೩೩೨೨ಗೆ
ಚಾಲನೆ ನೀಡಲಾಗಿದೆ ಎಂದು ಮೇಯರ್ ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ರೇಬೀಸ್ ಮುಕ್ತಗೊಳಿಸಲು ಪಾಲಿಕೆ ವತಿಯಿಂದ ಹಲವು ಕ್ರಮಗಳನ್ನು
ಕೈಗೊಳ್ಳಲಾಗುತ್ತಿದೆ. ಈ ಸಂಬAಧ ಬಿಬಿಎಂಪಿಯ ಜೊತೆ ಸ್ವಯಂಸೇವಕರಾಗಿ ಪಶುಪಾಲನಾ ಕಾಲೇಜು ಬೆಂಗಳೂರು ಸಹಾಯವಾಣಿ ಕೇಂದ್ರ ಪ್ರಾರಂಭಿಸಿದ್ದು, ನಾಯಿಗಳು ಯಾರಿಗಾದರೂ ಕಚ್ಚುವುದು, ಹುಚ್ಚುನಾಯಿ ಎಂದು ತಿಳಿದಾಗ ಅಥವಾ ಕಚ್ಚುವ ನಾಯಿ ಎಂದು ತಿಳಿದಾಗ
ಸಾರ್ವಜನಿಕರು ಪಾಲಿಕೆಯ ಸಹಾಯವಾಣಿಗೆ ಕರೆ ಮಾಡಿದರೆ ಕೂಡಲೆ ಪಶುಪಾಲನಾ ತಂಡವು ಸ್ಥಳಕ್ಕೆ
ತೆರಳಿ ನಾಯಿಯನ್ನು ಹಿಡಿದು ಸ್ಥಳೀಯ ಎಬಿಸಿ ಕೇಂದ್ರಗಳಲ್ಲಿ ೧೦ ದಿನಗಳ ಕಾಲ ಐಸೋಲೇಷನ್‌ನಲ್ಲಿ
ಇರಿಸಲಾಗುತ್ತದೆ. ರೇಬೀಸ್ ಎಂದು ಖಚಿತ ಪಟ್ಟರೆ ಅದಕ್ಕೆ ಚಿಕಿತ್ಸೆ ನೀಡುವುದು ಹಾಗೂ ಘಟನೆ ನಡೆದಿದ್ದ
ಸ್ಥಳದ ಸುತ್ತ-ಮುತ್ತಲಿನ ನಾಯಿಗಳಿಗೆ ವ್ಯಾಕ್ಸಿನೇಷನ್ ಮಾಡಲಾಗುತ್ತದೆ ಎಂದು ತಿಳಿಸಿದರು.

ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಬಿಬಿಎಂಪಿ ಹಾಗೂ ಕೆಲ ಸಂಘ-ಸAಸ್ಥೆಗಳು ಸ್ವಯಂಸೇವಕರಾಗಲು ಮುಂದೆ ಬರಲು ಕರೆ ನೀಡಿದ ಅವರು ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಿದರೆ ಪಾಲಿಕೆ ತಂಡವು ಘಟನೆ ನಡೆದ ಜಾಗಕ್ಕೆ ಹೋಗಿ ನಾಯಿಯನ್ನು ಹಿಡಿದು ಪರೀಕ್ಷೆ ಮಾಡುತ್ತಾರೆ. ಅಲ್ಲದೆ ಆ ಭಾಗದ ಎಲ್ಲಾ ನಾಯಿಗಳಿಗೆ ವ್ಯಾಕ್ಸಿನೇಷನ್ ನೀಡಲಾಗುತ್ತದೆ ಎಂದು ತಿಳಿಸಿದರು.
ರೇಬೀಸ್ ಚಿಕಿತ್ಸೆ ನೀಡುವ ಬಗ್ಗೆ ಸಮರ್ಪಕ ಮಾಹಿತಿ ಪಡೆಯಲು ಸಂಸ್ಥೆಯು
ತತ್ರಾAಶವನ್ನು ಸಿದ್ದಪಡಿಸಿದ್ದು, ಉಚಿತವಾಗಿ ಬಳಕೆ ಮಾಡಿಕೊಳ್ಳಲು ಪಾಲಿಕೆ ನೀಡಿದೆ. ಈ
ತಂತ್ರಾAಶದಿAದ, ನಾಯಿ ಹಿಡಿದ ಸ್ಥಳ, ನಾಯಿಯ ಭಾವಚಿತ್ರ ಹಾಗೂ ಜಿಯೋ ಲೊಕೇಶನ್
ಲಭ್ಯವಾಗಲಿದೆ. ಇದರಿಂದ ನಗರದಲ್ಲಿ ಎಷ್ಟು ನಾಯಿಗಳಿಗೆ ಚುಚ್ಚುಮದ್ದು ನೀಡಿದ್ದೇವೆ ಎಂಬ ಸಮರ್ಪಕ
ಮಾಹಿತಿ ಹಾಗೂ ಮುಂದಿನ ದಿನಗಳಲ್ಲಿ ರೇಬೀಸ್, ವ್ಯಾಕ್ಸಿನೇಷನ್ ಮಾಡಲು ಇದು ಸಹಕಾರಿಯಾಗಲಿದೆ.
ಮೂರು ವಾಹನಗಳಿಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರತೀ ವಲಯಕ್ಕೊಂದು
ವಾಹಾನ ಹಾಗೂ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.

ಉಪ ಮೇಯರ್ ರಾಮಮೋಹನ ರಾಜು, ಆಡಳಿತ ಪಕ್ಷದ ನಾಯಕ
ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕರು ಅಬ್ದುಲ್ ವಾಜೀದ್, ವಿಶೇಷ
ಆಯುಕ್ತರು(ಘನತ್ಯಾಜ್ಯ/ಆರೋಗ್ಯ) ಡಿ.ರಂದೀಪ್, ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರು
ಡಾ. ಶಶಿಕುಮಾರ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos